ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ನಾಡಗೌಡ ಫೌಂಡೇಶನ್ (ರಿ.) ಹಾಗೂ ನಾಡಗೌಡ ಅಭಿಮಾನ ಬಳಗ ಸಿಂಧನೂರು ವತಿಯಿಂದ ಸಿಂಧನೂರು ಶಾಸಕರಾದ ವೆಂಕಟರಾವ್ ನಾಡಗೌಡ ಅವರ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮ ಆಶ್ರಮದಲ್ಲಿ ಅನ್ನಪ್ರಸಾದ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ನೆರವೇರಿತು ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ವತಿಯಿಂದ ಶಾಸಕರಾದ ವೆಂಕಟರಾವ್ ನಾಡಗೌಡ ಅವರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಸಕರಾದ ವೆಂಕಟರಾವ್ ನಾಡಗೌಡ ಮಾತನಾಡಿ ಕಾರುಣ್ಯ ಸಹೃದಯಿ ಕುಟುಂಬ ಇಂತಹ ಕೆಲಸ ಯಾರಿಂದಲೂ ಮಾಡಲು ಅಸಾಧ್ಯ ಕಾರುಣ್ಯ ಆಶ್ರಮದ ತಂಡ ನೊಂದವರ ಕಣ್ಣೀರು ಒರೆಸುವುದರೊಂದಿಗೆ ದೇವರ ಪೂಜೆ ಮಾಡಿದಷ್ಟು ಪುಣ್ಯ ಪಡೆಯುತ್ತಲಿದೆ ಇಂತಹ ಪುಣ್ಯದ ಕರುಣಾಮಯಿ ಕಾರುಣ್ಯ ಆಶ್ರಮಕ್ಕೆ ಬಂದು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಕೂಡಾ ನನ್ನ ಪೂರ್ವ ಜನ್ಮದ ಸುಕೃತ ಎಂದು ಭಾವಿಸುತ್ತೇನೆ ಹೂವಿನ ಜೊತೆ ದಾರವೂ ಸ್ವರ್ಗ ಸೇರಿದಂತೆ ನೀವು ಮಾಡುವ ಪುಣ್ಯದ ಕೆಲಸದಲ್ಲಿ ನನಗೂ ಸ್ವಲ್ಪ ಪುಣ್ಯ ದೊರೆಯಲಿ ಎನ್ನುವುದೇ ನನ್ನ ಆಶಾಭಾವನೆ ಈ ಕಾರುಣ್ಯ ಆಶ್ರಮಕ್ಕೆ ನಿರಂತರವಾಗಿ ನನ್ನ ನೆರವಿನ ಹಸ್ತ ಇರುತ್ತದೆ ಈಗಾಗಲೇ ಒಳಬಳ್ಳಾರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬೇಕಾಗಿರುವ ಕಬ್ಬಿಣದ ಸಾಮಗ್ರಿಗಳನ್ನು ನಾನು ವೈಯಕ್ತಿಕವಾಗಿ ವಿತರಿಸುತ್ತೇನೆ ಇದರ ಜೊತೆ ಸರ್ಕಾರದ ಸವಲತ್ತುಗಳನ್ನು ದೊರೆಯುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜೈ ಭೀಮ್ ಘರ್ಜನೆ ಸಂಘ (ರಿ) ಸಿಂಧನೂರಿನ ಅಧ್ಯಕ್ಷರಾದ ನಿರುಪಾದಿ ಸಾಸಲಮರಿ. ಪ್ರಧಾನ ಕಾರ್ಯದರ್ಶಿಗಳಾದ ಹೊನ್ನೂರು ಕಟ್ಟಿಮನಿ ಮಲ್ಲಾಪುರ. ಹಾಗೂ ಸದಸ್ಯರುಗಳಾದ ಡಿ. ಬಾಲು ಬೂದಿಹಾಳ. ಬಸವರಾಜ ಇವರುಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರುಣ್ಯಾಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ. ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಜೆ.ಡಿ.ಎಸ್. ತಾಲೂಕ ಅಧ್ಯಕ್ಷರಾದ ಬಸವರಾಜ್ ನಾಡಗೌಡ ಕಾರುಣ್ಯಾಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ. ಜೆಡಿಎಸ್ ಮುಖಂಡರುಗಳಾದ ವೆಂಕೋಬಣ್ಣ ಕಲ್ಲೂರು. ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಯ್ಯನಗೌಡ ಆಯನೂರು. ವೆಂಕಟೇಶ ನಂಜಲದಿನ್ನಿ. ಮಲ್ಲಯ್ಯ ಸ್ವಾಮಿ ನವಲಿ. ಮಹಮದ್ ಯೂಸುಫ್. ಮತ್ತು ಜೆಸ್ಕಾಂ ಅಧಿಕಾರಿಗಳಾದ ಮಹಾನಂದಿ ಸ್ವಾಮಿ ನವಲಿ ಹಾಗೂ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಶೇಖರಯ್ಯ ಸ್ವಾಮಿ ಗೊರೇಬಾಳ. ಶೇಖರಯ್ಯ ಸ್ವಾಮಿ ಐಕೂರು. ಸುಜಾತ ಅಮರೇಶ ಮರಿಯಪ್ಪ ಶರಣಮ್ಮ ಮಲ್ಲಮ್ಮ ಬಸಮ್ಮ ಗಂಗಪ್ಪ ಅನೇಕರು ಉಪಸ್ಥಿತರಿದ್ದರು
ವರದಿ:- ವೆಂಕಟೇಶ.ಹೆಚ್.ಭೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.