ತಿಪಟೂರು : ಆತ್ಮ ನಿರ್ಭರ ಭಾರತಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ತುಮಕೂರು ಜಿಲ್ಲೆಗೆ ತೆಂಗು ಉತ್ಪನ್ನ ಆಯ್ಕೆಯಾಗಿರುವುದು ಜಿಲ್ಲೆಯ ತೆಂಗು ಬೆಳೆಗಾರರಿಗೆ ವರದಾನವಾಗಿದೆ.ಈ ಜಲ್ಲೆಯ ರೈತರ ಜೀವನಾಧಾರ ಬೆಳೆ ತೆಂಗನ್ನು ಈ ಯೋಜನೆಯಡಿ ತರುವಲ್ಲಿ ಶ್ರಮಿಸಿದ ತುಮಕೂರು ಲೋಕಸಭಾ ಸದಸ್ಯರಾದ ಜಿ.ಎಸ್.ಬಸವರಾಜುರವರಿಗೆ ತಿಪಟೂರು ತಾಲ್ಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಎಸ್.ಸದಾಶಿವಯ್ಯ ಅಭಿನಂದಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಜಿಲ್ಲೆಯ ಅದರಲ್ಲೂ ತಿಪಟೂರು ಕೊಬ್ಬರಿಗೆ
ವಿದೇಶದಲ್ಲೂ ಬಾರಿ ಬೇಡಿಕೆ ಇದೆ. ಈಗ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ತುಮಕೂರಲ್ಲಿ ತೆಂಗು ಆಯ್ಕೆಯಾಗಿರುವುದರಿಂದ ವಿವಿದ ಆಯಾಮಗಳಲ್ಲಿ ಮಾರುಕಟ್ಟೆ ವಿಸ್ತರಣೆಯಾಗುವುದರ ಜೊತೆಗೆ ಉದ್ಯೋಗವಕಾಶಗಳು ಸಿಗದಿದೆ. ಆದ್ದರಿಂದ ತೆಂಗಿನ ಉತ್ಪನ್ನಗಳನ್ನು ಒಂದು ಬ್ರಾಂಡ್‌ಮಾಡಿ ರಫ್ತು ಮಾಡಬಹುದಾಗಿದೆ. ಇದಕ್ಕಾಗಿ ತೆಂಗಿನ ಉತ್ಪನ್ನಗಳು ಬ್ರಾಂಡ್ ಆಗಬೇಕು ಆದ್ದರಿಂದ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿಕ್ರಾಸ್ ಬಳಿ ಬೀರಸಂದ್ರ ಗ್ರಾಮದ ಸರ್ವೆ ನಂ 7ರಲ್ಲಿ ಸರ್ಕಾರಿ ಜಾಗವಿದ್ದು ತೆಂಗು ವಿಶೇಷ ಆರ್ಥಿಕ ವಲಯ ಸ್ಥಾಪಿಸಬಹುದಾಗಿದೆ. ಇದು ಸುಧೀರ್ಘ ಪ್ರಕ್ರಿಯೆಯಾಗಿದ್ದು ಕಾರ್ಯರೂಪಕ್ಕೆ ಬಂದಿದ್ದೇ ಆದಲ್ಲಿ ಜಿಲ್ಲೆಗೆ ನಿಜಕ್ಕೂ ಆಶಾಕಿರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಂಸದರಾದ ಜಿ.ಎಸ್.ಬಸವರಾಜು ಕಾರ್ಯಪ್ರೌವೃತ್ತರಾಗಬೇಕೆಂದು ಕೆ.ಎಸ್.ಸದಾಶಿವಯ್ಯ ಮನವಿಮಾಡಿದ್ದಾರೆ.