ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನ್ನಡ ಭಾಷೆ ಇಡೀ ಜಗತ್ತಿನಲ್ಲಿ ಪ್ರಾಚೀನವಾದ ಭಾಷೆ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಾವೇರಿ

ಹಾವೇರಿ;ಕನ್ನಡ ಭಾಷೆ ಇಡೀ ಜಗತ್ತಿನಲ್ಲಿ ಪ್ರಾಚೀನವಾದ ಭಾಷೆಯಾಗಿದ್ದು, ಜಗತ್ತಿನಲ್ಲಿ ನಮ್ಮದು ಬಹುಶ್ರೇಷ್ಠ ಹಾಗೂ ಪರಂಪರೆ, ಚರಿತ್ರೆ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು ಹಾವೇರಿಯಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನಕ ಶರೀಫ ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಶುಕ್ರವಾರದಂದು ಉದ್ಘಾಟಿಸಿ ಅವರು ಮಾತನಾಡುತ್ತಾ ಕನ್ನಡದ ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ಶತ ಶತಮಾನಗಳ ಕಾಲ ಕನ್ನಡ ಶೀಮಂತವಾಗಿಯೇ ಇರುತ್ತದೆ, ಸೂರ್ಯ ಚಂದ್ರನಿರುವವರೆಗೂ ಬೆಳೆಯುತ್ತಲೇ ಇರುತ್ತದೆ ಕನ್ನಡಕ್ಕೆ ಆಪತ್ತು ಇದೆ ಎಂಬ ನಮ್ಮಲ್ಲಿವೆ ಆದರೆ ಕನ್ನಡಕ್ಕೆ ಆಪತ್ತು ತರುವಂತಹ ಯಾವುದೇ ಶಕ್ತಿ ಜಗತ್ತಿನಲ್ಲಿ ಹುಟ್ಟಿಲ್ಲ ಮುಂದೆ ಹುಟ್ಟುವುದೂ ಇಲ್ಲ, ಆತ್ಮಸಂಕಲ್ಪದಿಂದ ನಾವು ಕನ್ನಡವನ್ನು ಕಟ್ಟಿ ಬೆಳೆಸೋಣ, ಕನ್ನಡದ ಬೆಳವಣಿಗೆಯಲ್ಲಿ ನಮ್ಮಕೊಡುಗೆಯೂ ಇದೆ ಎಂಬ ಸಂಕಲ್ಪದಿಂದ ನಾವು ಸಮ್ಮೇಳನ ಮಾಡುತ್ತಿದ್ದೇವೆ.

8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಶ್ರೇಷ್ಠತೆ ನಮ್ಮ ರಾಜ್ಯದ್ದು,ವಚನಸಾಹಿತ್ಯ ಮತ್ತು ದಾಸ ಸಾಹಿತ್ಯ ಇವರೆಡೂ ಕನ್ನಡವನ್ನು ಶ್ರೀಮಂತಗೊಳಿಸಿವೆ. ಕನ್ನಡಿಗರ ಭಾಷೆ ನಮ್ಮರಾಜ್ಯದಲ್ಲಿ ವಿವಿಧತೆಯನ್ನು ಏಕತೆಯನ್ನು ಹೊಂದಿದೆ ನಡುನಾಡು ಕನ್ನಡ, ಗಡಿನಾಡು ಕನ್ನಡ,ದಕ್ಷಿಣ,ಉತ್ತರ,ಕರಾವಳಿ,ಕಲ್ಯಾಣ ಕರ್ನಾಟಕದ ಕನ್ನಡ

ಹೀಗೆ ತನ್ನದೇ ಆದ ಭಾಷೆಯ ಸೊಗಡು, ಅಲ್ಲಿಯ ಬದುಕಿನ ಜೊತೆಗೆ ಹಾಸುಹೊಕ್ಕಾಗಿ ಅದೂ ಕೂಡಾ ಬೆಳೆಯುತ್ತಿದೆ ಕನ್ನಡ ಭಾಷೆಗೆ ದೊಡ್ಡ ಪರಂಪರೆ ಇದೆ. ಹರಿದು ಹಂಚಿಹೋದ ಕನ್ನಡ ಮನಸುಗಳನ್ನು ಸ್ವಾತಂತ್ರ್ಯ ಹೋರಾಟದ ಬಳಿಕ ಕನ್ನಡ ಏಕೀಕರಣದ ಹೋರಾಟದ ಮೂಲಕ ಬೆಸೆಯಲಾಗಿದೆ ಏಕೀಕರಣ ಹೋರಾಟದಲ್ಲಿ ಅನೇಕರು ಸೇರಿ ಕನ್ನಡವನ್ನು ಒಂದಾಗಿಸಿದ್ದಾರೆ.ಕುವೆಂಪು,ಸಿದ್ದಪ್ಪ ಹೊಸಮನಿ, ಅಂದಾನಪ್ಪ ದೊಡ್ಡಮೇಟಿ,

ಎಸ್ ನಿಜಲಿಂಗಪ್ಪ, ಇವರೆಲ್ಲರನ್ನು ನಾವು ಸ್ಮರಿಸಬೇಕಿದೆ.ಅಲ್ಲದೆ ಮೈಲಾರ ಮಹದೇವಪ್ಪ ಅವರ ಹೋರಾಟ,ತ್ಯಾಗ ಬಲಿದಾನವನ್ನು ಯಾರೂ ಕೂಡಾ ಮರೆಯಲು ಸಾಧ್ಯವಿಲ್ಲ.

ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿ ರಾಜ್ಯವನ್ನು ನಮಗೆ ಅರ್ಪಿಸಿದರು.ನಮ್ಮ ನಾಡು ಸಂಪದ್ಭರಿತವಾಗಿದೆ.ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಇಲ್ಲಿನ ನೀರು,ಗಾಳಿ,ಬೆಳಕು ಮಣ್ಣು ಸೇರಿದಂತೆ ನಿಸರ್ಗ ನಮಗೆ ನೆರವಾಗಿದೆ, ಜೊತೆಗೆ ರೈತರ ಬೆವರೂ ಕೂಡಾ ಸೇರಿಕೊಂಡಿದೆ. ದುಡಿಯುವ ವರ್ಗ ನಮ್ಮರಾಜ್ಯವನ್ನು ಕಟ್ಟುತ್ತಿದೆಯೇ ಹೊರತು ಶ್ರೀಮಂತರಲ್ಲ ಹೀಗಾಗಿ ಕೂಲಿ ಕಾರ್ಮಿಕರಿಗೆ, ರೈತರಿಗೆ ಕೋಟಿ ನಮನಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ.ನಮ್ಮ ರಾಜ್ಯದಲ್ಲಿ ಇದೀಗ ನೀರಾವರಿ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ ಕಳೆದ 05 ವರ್ಷಗಳಲ್ಲಿ ರಾಜ್ಯದಲ್ಲಿ 1.5

ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಡಿಸಿದ್ದೇವೆ. ಮುಂದಿನ ಒಂದು ದಶಕವನ್ನು ನಾವು ನೀರಾವರಿ ದಶಕವೆಂದು ಘೋಷಿಸಲು ನಾವು ಇಚ್ಛಿಸಿದ್ದೇವೆ ಎಂದರು.

ವರದಿಗಾರರು ಮಂಜುನಾಥ ಪಾಟೀಲ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ