ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನ ಗುಡಿ ಶ್ರೀ ಬಲಭೀಮೇಶ್ವರ ಮತ್ತು ದಿಗ್ಗಿ ಸಂಗಮೇಶ್ವರ ಜೋಡಿ ಪಲ್ಲಕ್ಕಿ ಉತ್ಸವ ನೋಡುವುದೇ ಒಂದು ಸೌಭಾಗ್ಯ ಸಗರ ನಾಡಿನ ಆರಾಧ್ಯ ದೇವರು ಶ್ರೀ ಬಲಭೀಮೇಶ್ವರ ಜ. ೧೫ ರಂದು ಉತ್ತರಾಯಣ ಪುಣ್ಯ ಕಾಲದಲ್ಲಿ ಭೀಮಾ ನದಿಯಲ್ಲಿ ಗಂಗಾಸ್ನಾನ ನಡೆಯಲಿದೆ.
ಅಂದು ರಾತ್ರಿ ಬೃಹತ್ ಮೆರವಣಿಗೆಯೊಂದಿಗೆ ಮಾರ್ಗ ಮಧ್ಯೆ ಶಿರವಾಳ, ಹಳ್ಳಿಸಗರ, ಶಹಾಪುರ ನಗರದಲ್ಲಿ ಶ್ರೀ ಬಲಭೀಮೇಶ್ವರ ಮತ್ತು ದಿಗ್ಗಿ ಸಂಗಮೇಶ್ವರ ಜೋಡಿ ಪಲ್ಲಕ್ಕಿ ಉತ್ಸವ ನೋಡುವುದೇ ಶಹಾಪುರ ಜನತೆಗೆ ಒಂದು ದೊಡ್ಡ ಸೌಭಾಗ್ಯ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮರುದಿನ ಸೋಮವಾರ ಜ.೧೬ ರಂದು ಬೆಳಗಿನ ಜಾವದಲ್ಲಿ ಜೋಡಿ ಪಲ್ಲಕ್ಕಿ ಗರ್ಭಗುಡಿಗೆ ಪ್ರವೇಶ ಮಾಡುತ್ತಾರೆ. ಎಂದು ಶ್ರೀ ಬಲಭೀಮೇಶ್ವರ ಹಾಗೂ ದಿಗ್ಗಿ ಸಂಗಮೇಶ್ವರ ಪೂಜಾರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ ಶಹಾಪುರ