ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ರೈತರ ಪ್ರತಿಭಟನೆ

ಹನೂರು:ಯಾವುದೇ ಸರ್ಕಾರ ಬರಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಪಲವಾಗಿವೆ ಅಲ್ಲದೆ ಇದರಿಂದ ನಾವು ಬೆಳೆದ ಬೆಳೆಯು ನಾಶವಾಗಿ ನಷ್ಟ ಅನುಭವಿಸುವಂತಾಗಿದೆ ಎಂದು
ಕರ್ನಾಟಕ ರಾಜ್ಯ ರೈತ ಸಂಘದ ಚಾಮರಾಜನಗರ ಜಿಲ್ಲಾ ಅಧ್ಯಕ್ಷರಾದ ಬಸವಣ್ಣ ತಿಳಿಸಿದರು.
ಪಟ್ಟಣದ ವಿದ್ಯುತ್ ಇಲಾಖೆಯ ಹತ್ತಿರ ಪ್ರತಿಭಟನೆ ಹಮ್ಮಿಕೊಂಡಿರುವ ಸಮಯದಲ್ಲಿ ಮಾತನಾಡಿದ ಅವರು ಇಡೀ ರಾಜ್ಯದಲ್ಲಿ ಸಮಸ್ಯೆಯಿದೆ ಇಲಾಖೆಯವರು ಮಳೆಯಿರುವ ಸಮಯದಲ್ಲಿ ಯಾವುದೇ ರೀತಿಯಲ್ಲಿ ವಿದ್ಯುತ್ ತೊಂದರೆಮಾಡಲಿಲ್ಲ ನಮಗೆ ಅದರ ಅವಶ್ಯಕತೆ ಇರಲಿಲ್ಲ ಇಂತಹ ಸಮಯದಲ್ಲಿ ನಮಗೆ ಅವಶ್ಯಕತೆ ಇದೆ ಈ ಭಾಗದಲ್ಲಿ ಹೆಚ್ಚು ಹಳ್ಳಿಗಳಿಂದ ಕೂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಹಾಗಾಗಿ ಹಿಂದಿನ ದಿನಗಳಲ್ಲಿ ನಾವುಗಳ ಪ್ರತಿಭಟನೆ ಮಾಡುತ್ತಿದ್ದರೆ ಕೆಲವರನ್ನು ಶವಯಾತ್ರೆ ಮಾಡುತ್ತಿದ್ದೆವು ಆದರೆ ಇಂದಿನ ಪರಿಸ್ಥಿತಿಯಲ್ಲಿ ಬದಲಾಗಿದೆ ಅಂತಹ ಹೋರಾಟದಲ್ಲಿ ಪಾಲ್ಗೊಂಡ ನಿದರ್ಶನಗಳನ್ನು ಅಲ್ಪ ಪ್ರಮಾಣದಲ್ಲಿ ಕಾಣುತ್ತಿದ್ದೆವಿ ,ನಾವು ಮನೆಗಳಲ್ಲಿ ಅವರಿಗೆ ಕಟ್ಟುವ ಹಣದಿಂದ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಕಿಸೆ ತುಂಬಿಸಿಕೊಳ್ಳುವ ಜಾಣತನ ಅವರದ್ದು ಕಾರ್ಖಾನೆಯ ನಿರ್ಮಾಣಕ್ಕೆ ನಡೆಸಲು ಸಂಬಂಧಿಸಿದ ಕೆಲಸಕ್ಕೆ ವಿನಿಯೋಗಿಸುತ್ತಾರೆ,ಬಿ ಜೆ ಪಿ ಸರ್ಕಾರವು ಕೇಂದ್ರದಲ್ಲಿ ಅಧಿಕಾರ ಅವರದ್ದು ರಾಜ್ಯದಲ್ಲೂ ಅಧಿಕಾರ ಅವರದು ಇರುವುದರಿಂದ ಸಮಸ್ಯೆಗಳನ್ನು ಬಗೆಹರಿಸಬೇಕು ರೈತರಿಗೆ ತಮ್ಮದೆ ಆದ ಬದುಕಿದೆ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ನಮಗೆ ಇದೆ ನಾವುಗಳು ಅಂಬೇಡ್ಕರ್ ರವರ ಕಾನೂನಿನ ಪ್ರಕಾರ ನ್ಯಾಯ ಕೇಳೊಣ ಅಲ್ಲದೆ ಮಹಾತ್ಮ ಗಾಂಧಿಯವರ ಶಾಂತಿ ಪಾಲನೆ ಮಾಡೋಣ ನಮಗೆ ಕೊಡಬೇಕಾದ ವಿದ್ಯುತ್ ನೀಡಲಿ ಎಂದು ರೈತರಿಗೆ ತಿಳಿಸಿದರು.
ಇದೇ ಸಮಯದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಗೌಡೇಗೌಡ ಮಾತನಾಡಿ ಮಾನವ ಹಕ್ಕುಗಳ ಉಲ್ಲಾಂಗನೆ ಮಾಡುತ್ತಿದ್ದು ಅನ್ಯಾಯ ಮಾಡುತ್ತಿದ್ದಾರೆ.೧೯೯೯ ನಂಜುಂಡ ಸ್ವಾಮಿಯವರು ಒಂದು ತಿರ್ಮಾನ ಮಾಡಿದರು ಸಮಗ್ರ ವಿದ್ಯುತ್‌ ನೀಡಿ ನಂತರ ಹಣ ಕಟ್ಟಲು ತಿರ್ಮಾನಿಸಲಾಗಿತ್ತು ಅದೇ ರೀತಿ ನಮಗೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡದಿದ್ದರೆ ರೈತರು ಹಣ ಕಟ್ಟಬೇಡಿ ಹಾಗೂ
ನಮ್ಮ ಬೇಡಿಕೆಗಳಿಗೆ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಗೈದರು ಜಿಲ್ಲೆಯ ತೋಟದ ಮನೆಗಳಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಮತ್ತು ವ್ಯವಸಾಯಕ್ಕೆ 7 ಗಂಟೆ ವಿದ್ಯುತ್ ನೀಡದಿರುವುದು
,ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳು ಮೇಯಿವುದಕ್ಕೆ ಅರಣ್ಯದೊಳಗೆ ಹೋಗಲು ನಿಬ೯ಂದ ಹೇರುತ್ತಿರುವುದು.
, ಜಮೀನಿನ ಆರ್ ಟಿ ಸಿ (ಪಹಣಿ) ಪತ್ರ ಪಡೆಯುವುದಕ್ಕೆ ಸರ್ಕಾರದ ಶುಲ್ಕ 15 ರೂ ನಿಂದ 25 ರೂ ಏರಿಕೆ ಮಾಡಿರುವುದು.
ಆದುದರಿಂದ ಎಲ್ಲಾ ರೈತ ವಿರೋಧಿ ಕ್ರಮವನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೆವಿ ಇದೇ ಸಮಯದಲ್ಲಿ ಎಇಇ ಶಂಕರ್ , ರೈತ ಸಂಘಟನೆಯ ಶಿವರಾಮು ಜಿಲ್ಲಾ ಗೌರವ ಅಧ್ಯಕ್ಷರು,ರವಿ ನಾಯ್ಡು ಕಾರ್ಯದರ್ಶಿ,
ಮುತ್ತುರಾಜು ಗೌರವ ಅಧ್ಯಕ್ಷರು ಕಾಂಚಳ್ಳಿ, ಅಧ್ಯಕ್ಷ ಬಸವರಾಜ್
ಬಸವರಾಜು ಕಾಂಚಳ್ಳಿ ಉಪಾಧ್ಯಕ್ಷರು ರೈತ ಸಂಘ,ಮಹಾದೇವಸ್ವಾಮಿ ,ಪಳನಿಮೆಡು ಕನಕಮ್ಮ,ಪೋಂಗಡಿ ಲೋಕೇಶ್ ,ಪಳನಿಸ್ವಾಮಿ,ವೇಲುಸ್ವಾಮಿ,ಹಾಗೂ ರೈತರು ಹಾಜರಿದ್ದರು. ಅಧಿಕಾರಿಗಳಾದ ಶಂಕರ್ ಎ ಇ ಇ ಮತ್ತು ವಸಂತ್ ಕುಮಾರ್ ಇ ಇ ಹಾಜರಿದ್ದರು.
ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ