ಶಹಾಪುರ: ಶ್ರೀಜೀವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವ ನಮನ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಪಂಚಾಕ್ಷರಿ ಕೆ ಹಿರೇಮಠ ಮಾತನಾಡಿ ಸಿದ್ದೇಶ್ವರ ಶ್ರೀಗಳು ಜ್ಞಾನಿಗಳು,ವಾಗ್ಮಿಗಳಾಗಿದ್ದರು,ಅಪಾರ ಭಕ್ತಸ್ತೋಮವನ್ನು ಹೊಂದಿದ್ದರು ಹಾಗೂ ಸರಳ ಉದಾರ ಗುಣದ ಮಹಾ ಮಾನವತಾ ವಾದಿಯಾಗಿದ್ದರು ತಮ್ಮ ವೈಚಾರಿಕ ಹಾಗೂ ತತ್ವಜ್ಞಾನದ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಅನೇಕ ಪ್ರವಚನಗಳನ್ನು ನೀಡಿ ಜನ ಮನ ಸೂರೆಗೊಂಡಿದ್ದರು, ಅವರನ್ನು ಕಳೆದುಕೊಂಡ ಈ ಅಧ್ಯಾತ್ಮ ಲೋಕ ಬಡವಾಗಿದೆ ಎಂದರು ಪ್ರೌಢಶಾಲೆಯ ಮುಖ್ಯ ಗುರುಗಳಾದ ಪ್ರವೀಣ್ ಫಿರಂಗಿ,ಶ್ರೀಮತಿ ಸುರೇಖಾ ಏಕೋಟೆ,ಶ್ರೀಮತಿ ವರಲಕ್ಷ್ಮಿ,ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಸೌಮ್ಯ,ಶ್ರೀಧರ್,ಮೌನೇಶ ಅಯ್ಯಾಳ್ಕರ್, ವಿನೋದಕುಮಾರ ಕ್ಷೀರಸಾಗರ,ಶ್ರೀದೇವಪ್ಪ ಯಕ್ಶಂತಿ, ಶ್ರೀಮತಿ ಅಕ್ಕಮಹಾದೇವಿ, ಶ್ರೀಮತಿ ಸುನಿತಾ ಶಿರವಾಳ, ಶ್ರೀ ಸೂರ್ಯಕಾಂತ ಕಡಿ, ಶ್ರೀ ಆನಂದ ಮಾನು , ಜೀವೇಶ್ವರ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಶಿಕ್ಷಕಿಯರು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ ಶಹಾಪುರ