ಚಾಮರಾಜನಗರ:ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಗ್ರಾಮಗಳಲ್ಲಿ ವಾಸಿಸುವ ರೈತರ ಸಮಸ್ಯೆಗಳನ್ನು ಬಗೆಹರಿಸಲು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸೂಕ್ತವಾದ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ಕೆ ಸಭೆ ಮಾಡಲಾಯಿತು ಎಂದು ಶಾಸಕರಾದ ಆರ್ ನರೇಂದ್ರ ತಿಳಿಸಿದರು ಇದೇ ಸಮಯದಲ್ಲಿ ಮಾತನಾಡಿದ ಅವರು ನಮ್ಮ ಗ್ರಾಮಗಳ ಕೆಲವು ಸಮಸ್ಯೆಗಳನ್ನು
ವಿಧಾನಸಭಾ ಸೌಧದ ಸಮಿತಿ ಕೊಠಡಿ ಸಂಖ್ಯೆ 313 , 3ನೇ ಮಹಡಿ ವಿಧಾನಸೌಧ ಬೆಂಗಳೂರು ಇಲ್ಲಿ ” ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಸತ್ತೇಗಾಲ (ಜಾಗೇರಿ) ಗ್ರಾಮ ವ್ಯಾಪ್ತಿಯ ರಿಸನಂ 174ರಲ್ಲಿನ ಸಕಾ೯ರಿ ಜಮೀನಿನಲ್ಲಿ ಸುಮಾರು ವಷ೯ಗಳಿಂದ ಸಾಗುವಳಿ ಮಾಡುತ್ತಿರುವ ರೈತರುಗಳಿಗೆ ಪ್ರಸ್ತಾಪಿತ ಜಮೀನಿನ ಹಕ್ಕು ಪತ್ರ ನೀಡುವ ಕುರಿತಂತೆ ಸಭೆ ನಡೆಸಲಾಯಿತು ಎಂದು ತಿಳಿಸಿದರು .
ಇದೇ
ಸಭೆಯಲ್ಲಿ ಶಾಸಕರಾದ
ಶ್ರೀ ಎನ್.ಮಹೇಶ್, ಸಕಾ೯ರದ ಅಪರ ಮುಖ್ಯ ಕಾಯ೯ದಶಿ೯ ಅರಣ್ಯ ಇಲಾಖೆ, ಸಕಾ೯ರದ ಪ್ರಧಾನ ಕಾಯ೯ದಶಿ೯ಗಳು( ಕಂದಾಯ ಇಲಾಖೆ),ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು,ಆಯುಕ್ತರು, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಅಪರ ಜಿಲ್ಲಾಧಿಕಾರಿ,ಡಿಸಿಎಫ್,ಎಸಿ ಕೊಳ್ಳೇಗಾಲ, ಡಿಡಿಎಲ್ಆರ್ ಚಾಮರಾಜನಗರ ಮತ್ತು ಕೊಳ್ಳೇಗಾಲ ತಹಸೀಲ್ದಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
-ಉಸ್ಮಾನ್ ಖಾನ್