ದಾವಣಗೆರೆ:ಜ11.ಎಸ್.ಎಸ್.ಎಲ್.ಸಿ. ಶೈಕ್ಷಣಕ
ಹಂತ ಜೀವನದ ಪರಿವರ್ತನೆಯ ಒಂದು ತಿರುವು
ಶಿಕ್ಷಣ ಕೇವಲ ಅಂಕಪಟ್ಟಿಗೆ ಸೀಮಿತವಾಗದೇ
ಸಾಮಾಜಿಕ ಕಾಳಜಿ,ಸಮಾಜಕ್ಕೆ ಒಂದೊಳ್ಳೆ ಕೊಡುಗೆ ನೀಡುವ ವಿಶಾಲ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಜೀವನದ ಸಾರ್ಥಕೆಯ ಸಾಧನೆಗೆ ಶಿಕ್ಷಣವೇ ಮಾರ್ಗಸೂಚಿ ಎಂದು ದಾವಣಗೆರೆಯ ಸಮಾನ ಮನಸ್ಕರ ಸೇವಾ ಸಮಿತಿಯ ಸಂಸ್ಥಾಪಕರಾದ ಅಬ್ದುಲ್ ಸತ್ತಾರ್ ಸಾಹೇಬ್ ತಮ್ಮ ಅಭಿಮತ ವ್ಯಕ್ತಪಡಿಸಿದರು ದಾವಣಗೆರೆಯ ಎಸ್.ಎಸ್.ಎಂ.ನಗರ ಸರ್ಕಾರಿ ಉರ್ದು ಪ್ರೌಢಶಾಲೆಯ ಆವರಣದಲ್ಲಿ ನಿನ್ನೆ ದಿನ ದಾವಣಗೆರೆಯ ಕಲಾಕುಂಚ ಸಂಸ್ಥೆಯು ಹಮ್ಮಿಕೊಂಡಿದ್ದ “ಉರ್ದು ಶಾಲೆಯಲ್ಲಿ ಕನ್ನಡ ನಿತ್ಯೋತ್ಸವ” ಸಮಾರಂಭವನ್ನು ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ,ಕನ್ನಡ ಭಾಷೆಯನ್ನು ಕರ್ನಾಟಕವಲ್ಲದೇ ನೆರೆ ರಾಜ್ಯಗಳಲ್ಲೂ ವೈಭವೀಕರಿಸುವ ಕಲಾಕುಂಚ ಕಾರ್ಯ ಶ್ಲಾಘನೀಯ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಸಿದ್ಧತಾ ಉಚಿತ ಕಾರ್ಯಾಗಾರ ನಡೆಸಿಕೊಟ್ಟು ಸಾಲಿಗ್ರಾಮ ಗಣೇಶ್‌ಶೆಣೈಯವರು ಮಾತನಾಡಿ,ಮಕ್ಕಳ ಪೋಷಕರು ಮತ್ತು ಫಲಿತಾಂಶದೊಂದಿಗೆ ತಮ್ಮ ಮಕ್ಕಳು ಸಾಧನೆ ಮಾಡಬೇಕೆಂಬ ನಿರೀಕ್ಷೆ ಅಪೇಕ್ಷೆಯನ್ನು ಸಫಲಗೊಳಿಸಲು ಮಕ್ಕಳು ಈಗಿನಿಂದಲೇ ಬದ್ಧತೆಯಿಂದ ದೃಡವಾದ ಇಚ್ಛಾಶಕ್ತಿಯಿಂದ ಸಂಕಲ್ಪ ಮಾಡಿಕೊಂಡು ಉತ್ತಮ ಫಲಿತಾಂಶದ ಕೊಡುಗೆಯೇ ಗುರುಗಳಿಗೆ ಕೊಡುವ ಗುರುಕಾಣಿಕೆ ಹಾಗೂ ಮಕ್ಕಳ ಮುಂದಿನ ಭವ್ಯ ಭವಿಷ್ಯದ ಏಳಿಗೆಗಾಗಿ ಯಾವುದೇ ಉದಾಸೀನತೆ ಇಲ್ಲದೇ ನಿರ್ಲಕ್ಷ ತೊರದೇ ಭಯಬಿಟ್ಟು ಪರೀಕ್ಷೆ ಎದುರಿಸಿದರೆ ಉತ್ತಮ ಫಲಿತಾಂಶ ಶತಸಿದ್ಧ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಉರ್ದು ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಸೈಯದ್ ಅಶ್ವಕ್ ಮಾತನಾಡಿ,ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಯಂ ಪ್ರೇರಣೆಯಿಂದ ಸರ್ಕಾರಿ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಪರೀಕ್ಷೆ ಬರೆಯಲು ಧೈರ್ಯ ತುಂಬುವ ಉತ್ತಮ ಫಲಿತಾಂಶಕ್ಕ ಮಾರ್ಗದರ್ಶನ ನೀಡುತ್ತಿರುವ ಕಲಾಕುಂಚದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್ ಮಾತನಾಡಿ,ಬೆಳಿಗ್ಗೆ ಬೇಗ ಎದ್ದು ಮಾತೃಭಾಷೆ ಯಾವುದಾದರೂ ಕನ್ನಡ ಭಾಷೆಗೆ ಮಾನ್ಯತೆ ಗೌರವ ಕೊಟ್ಟಾಗ ಈ ಕನ್ನಡದ ನೆಲದಲ್ಲಿ ಹುಟ್ಟಿದ ನಾವು ನೀವು ಈ ಮಣ್ಣಿನ ಋಣ ತೀರಿಸಿದಂತಾಗುತ್ತದೆ ಎಂದರು ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ನಾಡಗೀತೆಯೊಂದಿಗೆ ಪ್ರಾರಂಭವಾದ ಕನ್ನಡ ನಿತ್ಯೋತ್ಸವ ಸಮಾರಂಭಕ್ಕೆ ಕನ್ನಡ ಶಿಕ್ಷಕಿ ಅಂಬುಜಾಕ್ಷಿ ಸ್ವಾಗತಿಸಿದರು ಕಲಾಕುಂಚ ಸಕ್ರಿಯ ಸದಸ್ಯರಾದ ಶ್ರೀಮತಿ ಪ್ರಮೀಳಮ್ಮ ಮೃತ್ಯುಂಜಯ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು ಸಹ ಶಿಕ್ಷಕಿ ಪಾತಿಮಾ ಕಂಚರಗಟ್ಟಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿದರು ಕೊನೆಯಲ್ಲಿ ಶಿಕ್ಷಕಿ ಶೋಭಾ
ಕೆ.ಹೆಚ್.ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.