೧ರಿಂದ ೧೨ನೇ ತರಗತಿ ವರೆಗೆ ಉಚಿತ ಆರೋಗ್ಯ ತಪಾಸಣೆ
ಶಹಾಪುರ: ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮ ೨೦೨೨ -೨೩ನೇ ಸಾಲಿನ ಶಹಾಪುರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ೧ ರಿಂದ ೧೨ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ (ಸಿ.ಡಬ್ಲ್ಯೂ.ಎಸ್.ಎನ್) ವಿಕಲಚೇತನ ಮಕ್ಕಳಿಗಾಗಿ ದಿ: ೧೩/೧/೨೦೨೩ ರಂದು ನಡೆಯುವ ಕಾರ್ಯಕ್ರಮ ನಡೆಯುವ ಸ್ಥಳ (ಬಿ.ಆರ್.ಸಿ ಕಾರ್ಯಾಲಯ ಹಿಂಬಾಗದಲ್ಲಿ) ವೈದ್ಯಕೀಯ ಮೌಲ್ಯಾಂಕನ ಶಿಬಿರ ಏರ್ಪಡಿಸಲಾಗುತ್ತದೆ ಖ್ಯಾತ ತಜ್ಞ ವೈದ್ಯರ ತಂಡ ಆಲಿಂಕೊ ಹಾಗೂ ಸಮಗ್ರ ಶಿಕ್ಷಣ ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಬಾ ಜಲಿಯನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ ಶಹಾಪುರ