ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಪದವಿ ಕಲಾ ಮಹಾವಿದ್ಯಾಲಯದಲ್ಲಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಉಪನ್ಯಾಸಕರಾದ ಶ್ರೀ ಅದೃಶಗೌಡ ಪಾಟೀಲರು ಮಾತನಾಡುತ್ತಾ ವಿವೇಕಾನಂದರ ಆದರ್ಶಗಳನ್ನು ಅಮೇರಿಕಾದ ಚಿಕಾಗೋದಲ್ಲಿ ಜಗತ್ತು ಕೊಂಡಾಡಿದ ಹಾಗೆ ಇಂದಿನ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ದಿನೇಶಕುಮಾರ ಅಜಮೇರಾ ಉಪನ್ಯಾಸಕರು ಸಾಹಿತಿಗಳು ವಿದ್ಯಾರ್ಥಿಗಳಿಗೆ ಸನಾತನ ಧರ್ಮದ ಉಳಿವಿಗಾಗಿ ವಿವೇಕಾನಂದರ ವಿಚಾರಧಾರೆಗಳನ್ನು ಈ ದೇಶದ ಭವಿಷ್ಯ ಯುವಕರಲ್ಲಿ ಹೇಗೆ ಸಮ್ಮಿಳಿತವಾಗಿದೆ ಅದನ್ನೂ ಚೇತನಗೊಳಿಸುವ ವಿಶ್ವಾಸ ವಿವೇಕಾನಂದರ ವಾಣಿಗಳಲ್ಲಿವೆ ಅದನ್ನು ಕರಗತ ಮಾಡಿಕೊಳ್ಳಲು ಸಲಹೆ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ ಜಿ ಆರ್ ವಾಲಿ ಅವರು ವಿದ್ಯಾರ್ಥಿಗಳಿಗೆ ನರೇಂದ್ರ ವಿವೇಕಾನಂದರಾದ ಪರಿಯನ್ನು ವಿವರಿಸಿದರು ಕಾರ್ಯಕ್ರಮ ಸಂಯೋಜಕರಾದ ಶ್ರೀ ಶಿದ್ರಾಮನಿ ಉಪನ್ಯಾಸಕರು ಶ್ರೀ ಜವಳಿ ಉಪನ್ಯಾಸಕರು ಹಾಗೂ ಉಪನ್ಯಾಸಕಿ ಕುಮಾರಿ ದ್ರಾಕ್ಷಾಯಿಣಿ ಸಂಗೊಳ್ಳಿ ಉಪಸ್ಥಿತರಿದ್ದರು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು..
ವರದಿಗಾರ:ದಿನೇಶ್ ಕುಮಾರ್.ಅಜಮೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.