ಸಿಂಧನೂರು ತಾಲೂಕಿನ ಕನ್ನಾರಿ ಗ್ರಾಮದ ಸ.ಕಿ.ಪ್ರಾ.ಶಾಲೆಯ ಆವರಣದಲ್ಲಿ ಇಂದು ಗುರುವಾರ ವನಸಿರಿ ಫೌಂಡೇಶನ್ ಸಿಂಧನೂರು,ಸ.ಕಿ.ಪ್ರಾ.ಶಾಲೆ ಕನ್ನಾರಿ ಹಾಗೂ ಆರೋಗ್ಯ ಧಾಮ ಕನ್ನಾರಿ ನೇತೃತ್ವದಲ್ಲಿ “ಸ್ವಾಮಿ ವಿವೇಕಾನಂದರ ಜಯಂತೋತ್ಸವ”(ರಾಷ್ಟ್ರೀಯ ಯುವ ದಿನ) ಹಾಗೂ “ಅವಧೂತ ಪರಂಪರೆಯ ಶರಣ ಶ್ರೀ ಸಿದ್ದಪ್ಪ ತಾತನವರ ನೆನೆಯುವ ಕಾರ್ಯಕ್ರಮ”ದ ನಿಮಿತ್ತವಾಗಿ ಸಸಿ ನೆಡುವ ಕಾರ್ಯಕ್ರಮ ಮತ್ತು ಮಕ್ಕಳಿಗೆ ಪರಿಸರ ಜಾಗೃತಿ ಕಾರ್ಯಗಾರ ಅದ್ದೂರಿಯಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಅಮರೇಗೌಡ ಮಲ್ಲಾಪೂರ ಮಾತನಾಡಿ ವನಸಿರಿ ತಂಡ ಇಡೀ ರಾಜ್ಯದಲ್ಲೇ ಕಾರ್ಯನಿರ್ವಹಿಸುತ್ತಿದೆ.ವನಸಿರಿ ತಂಡ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ದೇವಸ್ಥಾನಗಳಲ್ಲಿ ಸ್ವಯಂ ಪ್ರೇರಿತವಾಗಿ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುತ್ತಾ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.ಈ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳಲು ನಾವುಗಳು ಏನಾದರು ವಿಶೇಷ ದಿನದಂದು ಆಚರಿಸಲು ನಿಮ್ಮಂತಹ ಶಾಲೆಗಳನ್ನು ಹುಡುಕಿಕೊಂಡು ಬರುತ್ತೇವೆ ಇಂದು ಸ್ವಾಮಿ ವಿವೇಕಾನಂದರ ಯುವಕ ಜಯಂತೋತ್ಸವ ಕಾರ್ಯಕ್ರಮಕ್ಕೆ ನಿಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದೇ ರೀತಿ ರಾಜ್ಯಾದ್ಯಂತ ಇರುವ ಶಾಲೆಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳುತ್ತೇವೆ.ಸ್ವಾಮಿ ವಿವೇಕಾನಂದರು ಯುವಕರಿಗೆ ಮಾದರಿ ವ್ಯಕ್ತಿಯಾಗಿದ್ದಾರೆ.ಅವರ ಆದರ್ಶಗಳು,ತತ್ವಗಳನ್ನು ನಾವುಗಳೆಲ್ಲರೂ ಅಳವಡಿಸಿಕೊಳ್ಳಬೇಕು,ಅವರ ಮುಖದಲ್ಲಿ ತೇಜಸ್ಸಿ ಎದ್ದು ಕಾಣುವುದು ಅವರ ಎಲ್ಲಾ ಕಾರ್ಯಗಳಿಗೆ ಪ್ರೇರಣೆಯಾಗಿದೆ ಪ್ರತಿಯೊಬ್ಬರೂ ಅವರಂತೆಯೇ ಹಸನ್ಮುಖಿಯಾಗಿ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗಬೇಕು ಎಂದರು. ನಂತರ ಮಕ್ಕಳಿಗೆ ಪರಿಸರದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ,ಪರಿಸರದ ಸಿಗುವ ಸೌಲಭ್ಯಗಳ ಬಗ್ಗೆ ಮಕ್ಕಳು,ಶಿಕ್ಷಕರ ಹಾಗೂ ಸಮುದಾಯಗಳ ಜೊತೆ ಪರಿಸರದ ಸೌಲಭ್ಯಗಳು ಹಾಗೂ ಪರಿಸರ ನಾಶದಿಂದಾಗುವ ತೊಂದರೆಗಳ ಬಗ್ಗೆ ಚರ್ಚಾಕೂಟ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳು ಅತ್ಯಂತ ಉತ್ಸುಕರಾಗಿ ಭಾಗವಹಿಸಿ ಸಂತೋಷಗೊಂಡರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಊರಿನ ಹಿರಿಯರಾದ ಶರಣೇಗೌಡ ಗೊರೆಬಾಳ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಅಮರೇಗೌಡ ಮಲ್ಲಾಪೂರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು, ಸಿದ್ದಪ್ಪ ಮುಖ್ಯೋಪಾಧ್ಯಾಯರು, ಯಂಕೋಬ SDMCಅದ್ಯಕ್ಷರು,ಕಾಂತರಾಜ ಶಿಕ್ಷಕರು,ಅಮರೇಶ ಮಡಿವಾಳ,ಈರಣ್ಣ ಕುರಿ,ಕರಿಲಿಂಗಪ್ಪ,ಮೌನೇಶ ನಾಯಕ,ಸಿದ್ರಾಮೇಶ್ವರ SBI,ಶಾರದಮ್ಮ ಹಾಗೂ ಶಾಲೆಯ ಮುದ್ದು ಮಕ್ಕಳು ಭಾಗಿಯಾಗಿದ್ದರು.