ಚೇಳಾೖರು ಮಂಗಳೂರು ಜನವರಿ 12 : ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ಣಯದ ಪ್ರಕಾರ ಇವತ್ತು ಚೇಳಾೖರು ಹಾಗೂ ಆಸು ಪಾಸಿನ ಪ್ರೌಢ ಶಾಲೆಗಳಿಗೆ ತೆರಳಿ 2023 – 2024 ರ ಶೈಕ್ಷಣಿಕ ವರ್ಷ ಮಕ್ಕಳು ಹತ್ತನೇ ತರಗತಿ ಮುಗಿಸಿ ತೇರ್ಗಡೆಯಾದ ನಂತರ ಚೇಳಾೖರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತೆ ಹುರಿದುಂಬಿಸಲು ಅಭಿಯಾನ ಆಯೋಜಿಸಲಾಯಿತು ಅಭಿಯಾನವನ್ನು ಎರಡು ತಂಡಗಳಾಗಿ ಮಾಡಿ ಚೇಳಾೖರು ಪ್ರೌಢ ಶಾಲೆ,ಮಧ್ಯ ಶಾಲೆ,ಸೂರಿಂಜೆ,ಕೃಷ್ಣಾಪುರ 5ನೇ ವಿಭಾಗ, ಚಿತ್ರಾಪುರ,ಮೀನ ಕಳಿಯ,ಅಂಗರಗುಂಡಿ, ಮಹಾಲಿಂಗೇಶ್ವರ ಶಾಲೆ ಇಡ್ಯಾ,ಚರ್ಚ್ ಶಾಲೆ,ಎನ್ ಐ ಟಿ ಕೆ ಶಾಲೆ ಗಳಿಗೆ ಭೇಟಿ ಕೊಟ್ಟು ಕಾಲೇಜಿನ ಬಗ್ಗೆ ಸೂಕ್ತ ಮಾಹಿತಿ ಕೊಟ್ಟು ಕಾಲೇಜಿನ ಮಾಹಿತಿಯ ಬಿತ್ತಿ ಪತ್ರ ವಿತರಿಸಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲಾಯಿತು ತಂಡದ ನೇತೃತ್ವವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶ್ರೀವೆಂಕಟೇಶ ಶೆಟ್ಟಿ ಮತ್ತು ಸದಸ್ಯ ಶ್ರೀ ಚಂದ್ರಶೇಖರ ಹೆಬ್ಬಾರ್ ಕೊಲ್ಯ ವಹಿಸಿ ಪ್ರಾಂಶುಪಾಲೆ ಶ್ರೀಮತಿ ಡಾ.ಜ್ಯೋತಿ ಚೇಳಾೖರು, ಪ್ರಾದ್ಯಾಪಕ ಶ್ರೀಚಂದ್ರನಾಥ್,ಪ್ರಾದ್ಯಾಪಕಿ ಶ್ರೀಮತಿ ಶೋಭಾ,ಕು.ಮಮತಾ,ಶ್ರೀ ಅನಂತ ಐತಾಳ್ , ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ,ಪಣಂಬೂರ್ ನಂದನೇಶ್ವರ ದೇವಸ್ಥಾನ,ಶ್ರೀಪುಷ್ಪರಾಜ ಶೆಟ್ಟಿ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಹಾಗೂ ನಾಲ್ಕು ವಿದ್ಯಾರ್ಥಿಗಳು ನಿಯೋಗದಲ್ಲಿ ಭಾಗವಹಿಸಿದ್ದರು. ಪ್ರತಿಯೊಂದು ಶಾಲೆಯ ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕ ವರ್ಗ ಉತ್ತಮ ಸಹಕಾರ ನೀಡಿದರು. ಅಭಿಯಾನದ ಯಶಸ್ಸಿಗೆ ಭಾಗಿಯಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ ಪ್ರಾಂಶುಪಾಲೆ ಶ್ರೀಮತಿ ಡಾ ಜ್ಯೋತಿ ಚೇಳಾೖರುರವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಳ್ಳುತ್ತಾರೆಂಬ ಆಶಯವನ್ನು ವ್ಯಕ್ತ ಪಡಿಸಿದರು.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ