ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ನಿರ್ಮಾಣವಾದ ತಾಲೂಕಿನ ಪ್ರಮುಖ ಜಲಾಶಯಗಳಲ್ಲಿ ಒಂದು.
ಆದರೆ ಬಾಚಣಕಿ ಜಲಾಶಯ ಈಗ ಅಕ್ಷರಶಃ ಸಾವಿನ ಮನೆ ಆಗಿ ಬದಲಾಗಿರುವುದು ನಿಜಕ್ಕೂ ಪೊಲೀಸ್ ಇಲಾಖೆ ಹಾಗೂ ಇಲ್ಲಿನ ನಾಗರಿಕರಿಗೆ ತೀವ್ರ ಕಳವಳ ಹಾಗು ತಲೇನೋವಾಗಿ ಪರಿಣಮಿಸಿದ್ದು,
ಪ್ರೇಮಿಗಳು,ಬದುಕಿನಲ್ಲಿ ನೊಂದವರು,ಕೊಲೆ ಪ್ರಕರಣ? ಆಕಸ್ಮಿಕ ಸಾವು,ಈ ರೀತಿಯಾಗಿ ನಾನಾ ಕಾರಣಗಳಿಗೆ ಜನ ಬಾಚಣಕಿ ಜಲಾಶಯದಲ್ಲಿ ಜೀವ ಕಳೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ.ಈ ಬಾಚಣಕಿ ಜಲಾಶಯ ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ಬರುತ್ತಿರುವುದರಿಂದ ಸಣ್ಣ ನೀರಾವರಿ ಇಲಾಖೆ ಹಾಗೂ
ಪಿ ಡಬ್ಲ್ಯೂ ಡಿ ಇಲಾಖೆಯ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತಿದ್ದು ಅಧಿಕಾರಿಗಳು ಸ್ವಲ್ಪ ಮುಂಜಾಗ್ರತೆ ವಹಿಸಿ ಜಲಾಶಯಕ್ಕೆ ಒಬ್ಬ ಕಾವಲುಗಾರ ಹಾಗೂ ಜಲಾಶಯ ನಿರ್ವಾಹಕನ ನೇಮಿಸುವುದು ತೀರಾ ಅವಶ್ಯಕ ಎಂದು ಇಲ್ಲಿನ ನಾಗರಿಕರು ಅಭಿಪ್ರಾಯ ಪಟ್ಟಿದ್ದು ಜನರ ಸಾವಿನ ಬಗ್ಗೆ ಬೇಸರ ಪಟ್ಟುಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯ
ಸಬ್ ಇನ್ಸ್ ಪೆಕ್ಟರ್ ಯಲ್ಲಾಲಿಂಗ ಕುನ್ನುರು ಅವರನ್ನು ಕರುನಾಡ ಕಂದ ಸುದ್ದಿ ಪರಿಸ್ಥಿತಿಯ ಬಗ್ಗೆ ವಿವರಿಸಿದಾಗ ಯಲ್ಲಾಲಿಂಗ ಅವರು ಹೌದು ಬಾಚಣಕಿ ಜಲಾಶಯದಲ್ಲಿ ಆಗುತ್ತಿರುವ ಸಾವುಗಳ ಸಮಸ್ಯೆ ಗಂಭೀರವಾಗಿದ್ದು,ಈ ಬಗ್ಗೆ ಜಲಾಶಯಕ್ಕೆ ಕಾವಲುದಾರ ರನ್ನು ನೇಮಿಸುವಂತೆ ಪತ್ರವನ್ನೂ ಸಣ್ಣ ನೀರಾವರಿ ಹಾಗೂ ಪಿ ಡಬ್ಲ್ಯೂ ಡಿ ಇಲಾಖೆಗೆ ಬರೆದಿದ್ದು ಸಂಬಂದಿಸಿದ ಇಲಾಖೆಗಳು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಇನ್ನಾದರೂ ಸಂಬಂಧಿಸಿದ ಇಲಾಖೆಗಳು ಬಾಚಣಕಿ ಜಲಾಶಯಕ್ಕೆ ಒಬ್ಬ ಕಾವಲುದಾರ ಹಾಗೂ ನಿರ್ವಾಹಕನನ್ನು ನೇಮಿಸಿ ರಾತ್ರಿ ವೇಳೆ ಅಪರಿಚಿತ ವಾಹನಗಳು ಹಾಗೂ ವ್ಯಕ್ತಿಗಳನ್ನು ಜಲಾಶಯದ ಆವರಣದ ಒಳಗೆ ಬಿಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಜಲಾಶಯದ ಪಕ್ಕದಲ್ಲಿ ಕೆಲವರು ಮಣ್ಣು ಅಗೆದು ಮಾರಿಕೊಳ್ಳುತ್ತಿದ್ದು ಈ ಬಗ್ಗೆ ಯಾವುದೇ ರೀತಿಯ ತಲೆ ಕೆಡಿಸಿಕೊಳ್ಳದ ಸಂಬಂಧ ಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನವನ್ನು ತಾಲೂಕಾ ಆಡಳಿತ ನೀಡುವ ಅವಶ್ಯಕತೆ ಎದ್ದು ಕಾಣುತ್ತಿದೆ.