ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ನಮ್ಮ ಸಿಂಧನೂರಿನ ಸಾಧಕರನ್ನು ಸನ್ಮಾನಿಸುವ ಸಂಕಲ್ಪ ನಮ್ಮದು ಎಂ.ಡಿ.ನದಿಮುಲ್ಲಾ

ಸಿಂಧನೂರು ನಗರದ ಪ್ರವಾಸಿ ಮಂದಿರದಲ್ಲಿ ಎಂ.ಡಿ.ನದಿಮುಲ್ಲಾ ಜೆಡಿಎಸ್ ನಗರ ಘಟಕ ಅಧ್ಯಕ್ಷರು ಪೀರ್ ಪಾಷಾ ಖಾಜಿ ರೌವಡಕುಂದ ಇವರುಗಳ ವತಿಯಿಂದ ಸಿಂಧನೂರಿನ ಕಾರುಣ್ಯ ಆಶ್ರಮದ ಅನಾಥಪರ,ಸಮಾಜಪರ ಸೇವೆಯನ್ನು ಪರಿಗಣಿಸಿ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ಸಮಾಜಸೇವಕರು ಮತ್ತು ನಿರ್ಗತಿಕರ ಬಾಳಿಗೆ ಬೆಳಕಾಗಿರುವ ಉಸ್ಮಾನ್ ಪಾಷಾ ಮಕಾಂದರ್ ಷಾ ಆಟೋ ಚಾಲಕರು ಇವರುಗಳನ್ನು ಸನ್ಮಾನಿಸಿ ಗೌರವಿಸಿ ಹೊಸ ವಸ್ತ್ರಗಳನ್ನು ವಿತರಿಸಿ ಧನ ಸಹಾಯ ಮಾಡಿ ಇವರುಗಳ ಸೇವೆಗೆ ಪ್ರೋತ್ಸಾಹಿಸುವ ಕಾರ್ಯಕ್ರಮ ಜರುಗಿತು ಈ ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಕರ್ನಾಟಕ ಸೇನೆಯ ತಾಲೂಕಿನ ಅಧ್ಯಕ್ಷರು ಮಂಜುನಾಥ ಗಾಣಿಗೇರವರು ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನಗರ ಘಟಕ ಅಧ್ಯಕ್ಷರಾದ ಎಂ.ಡಿ. ನದಿಮುಲ್ಲಾ ನಮ್ಮ ಸಿಂಧನೂರಿನ ಸಾಧಕರನ್ನು ಸನ್ಮಾನಿಸುವ ಸಂಕಲ್ಪ ನಮ್ಮದು ಇಂದು ಸನ್ಮಾನಿಸಿರುವ ಈ ಎರಡು ಜೀವಿಗಳು ಸಿಂಧನೂರಿನ ಕರುಣಾಮಯಿ ಮನಸ್ಸುಗಳಾಗಿವೆ. ಕೊರೋನಾದಂತಹ ವೇಳೆಯಲ್ಲಿ ಇವರ ಸೇವೆ ನಮ್ಮ ತಾಲೂಕಿಗೆ ಅಪಾರವಾಗಿತ್ತು ಆದರೆ ಇವರನ್ನು ತಾಲೂಕಾಡಳಿತ ಗುರುತಿಸಲಿಲ್ಲ ಇಂದಿನ ಸಮಾಜದಲ್ಲಿ ನಮ್ಮ ಕುಟುಂಬದಲ್ಲಿರುವ ಹಿರಿಯ ಜೀವಿಗಳ ರಕ್ಷಣೆಗೆ ಎಷ್ಟು ಕಷ್ಟ ಪಡುತ್ತೇವೆ ಆದರೆ ಅದೆಷ್ಟು ಅಂದ ಅನಾಥರ ಬಾಳಿಗೆ ಬೆಳಕಾಗಿ ಸೇವೆಗೆಯುತ್ತಿರುವ ಕಾರುಣ್ಯ ಆಶ್ರಮ ಮತ್ತು ಉಸ್ಮಾನ್ ಪಾಷಾ ಅವರ ಸಮಾಜ ಪರ ನಮ್ಮ ಸಿಂಧನೂರಿನ ಘನತೆ ಗೌರವವನ್ನು ಹೆಚ್ಚಿಸಿದೆ.ಸರ್ವ ಸಮಾಜಗಳ ಪ್ರೀತಿಗೆ ಪಾತ್ರರಾದ ಈ ಇಬ್ಬರು ಸಾಧಕರುಗಳು ಸಿಂಧನೂರು ತಾಲೂಕಿನ ಎರಡು ಕಣ್ಣುಗಳಾಗಿವೆ ಈ ಕಣ್ಣುಗಳನ್ನು ರಕ್ಷಣೆ ಮಾಡಿಕೊಂಡು ನಾವೆಲ್ಲರೂ ಇವರಿಗೆ ಸಹಾಯ ಸಹಕಾರ ಮಾಡಬೇಕು ಇವರು ಮಾಡುತ್ತಿರುವ ಕಾರ್ಯಗಳ ಮುಂದೆ ಇಂತಹ ಸನ್ಮಾನಗಳು ಇವರಿಗೆ ಸೂಕ್ತವಾದ ಸನ್ಮಾನಗಳಾಗಿವೆ ಅದೇ ರೀತಿ ಪ್ರತಿಯೊಬ್ಬರೂ ಕೂಡಾ ಈ ಸಾಧಕರುಗಳನ್ನು ಸನ್ಮಾನಿಸುವ ಮೂಲಕ ಪ್ರೋತ್ಸಾಹ ನೀಡಿದಾಗ ಮಾತ್ರ ಇವರಿಗೂ ಕೂಡ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಮನಸ್ಸು ಮೂಡುತ್ತದೆ ನಾವೆಲ್ಲರೂ ಕೂಡಾ ನಿಮ್ಮೊಂದಿಗೆ ಸಮಾಜದ ಯಾವುದೇ ಟೀಕೆ ಟಿಪ್ಪಣಿಗಳಿಗೆ ಬಗ್ಗದೆ ಬಸವಣ್ಣನವರ ಕಾಯಕದಂತೆ ಕಾಯಕವೇ ಕೈಲಾಸ ಎನ್ನುವ ಹಾಗೆ ಸೇವೆ ಮಾಡಿ ಎಂದು ಮಾತನಾಡಿ ಈ ಸಾಧಕರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷರಾದ ಮಂಜುನಾಥ ಗಾಣಿಗೇರ ಅವರು ಎಲ್ಲಾ ಸಮಾಜ ಸೇವಕರುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸುವ ಸಿಂಧನೂರಿನ ಸಮಾಜ ಸೇವಕರಾದ ಸೈಯದ್ ಹನೀಫ್ ಅವರನ್ನು ಸನ್ಮಾನಿಸಿ ಗೌರವಿಸಿದರು ಹಾಗೂ ಪೀರ್ ಪಾಷಾ ಖಾಜಿ ರೌಡಕುಂದ,ನಿಸಾರ್ ಖಾನ್ ಯುವ ಮುಖಂಡರು,ಪ್ರದೀಪ ಪೂಜಾರಿ ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು,ಖಾಜಾ ಬನ್ನಿಗನೂರು ತಾಲೂಕಾಧ್ಯಕ್ಷರು ಕನ್ನಡ ಜಾಗೃತಿ ವೇದಿಕೆ ಅಲ್ಪಸಂಖ್ಯಾತರ ಘಟಕ,ಓಬಳೇಶ ನಾಯಕ ಗೊರೇಬಾಳ,ಮಹಿಬೂಬ್ ಎಂ.ಎಲ್.ಎ ಯುವ ಮುಖಂಡರು,ಮೌಲಾಸಾಬ್ ಕಾಂಗ್ರೆಸ್ ಮುಖಂಡರು. ಖಾಸಿಂಸಾಬ್ ಪತ್ರಕರ್ತರು, ಕರೀಮ್ ಸಾಬ್ ಡ್ರೈವರ್ ಅನೇಕ ಕನ್ನಡಪರ ಸಂಘಟನೆ ಹೋರಾಟಗಾರರು ಮತ್ತು ಎಲ್ಲಾ ಸಮಾಜದ ಮುಖಂಡರು ಉಪಸ್ಥಿತರಿದ್ದರು
ವರದಿ:- ವೆಂಕಟೇಶ.ಹೆಚ್. ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ