ಜೇವರ್ಗಿ : ದತ್ತ ನಗರ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ(ರಿ) ಯಲ್ಲಿ ಇಂದು ಜೇವರ್ಗಿ ತಾಲ್ಲೂಕು ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಜಟ್ಟೆಪ್ಪ ಪೂಜಾರಿ ಅವರು ಹಾಗೂ ತಂಡದ ವತಿಯಿಂದ ಇಂದು ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿವಿಧ ಭಂಗಿಗಳ ಮೂಲಕ ಕರಾಟೆಯಿಂದ ಆತ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂದು ಅದ್ಭುತವಾಗಿ ಮಕ್ಕಳ ಮುಂದೆ ತಮ್ಮ ಕಲೆಯನ್ನು ಪ್ರದರ್ಶಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ ಎಸ್ ಪಾಟೀಲ್ ರವರು ಸಂಸ್ಥೆಯ ವತಿಯಿಂದ ಕರಾಟೆಯ ತಾಲ್ಲೂಕ ಅಧ್ಯಕ್ಷರಾದ ಜಟ್ಟೆಪ್ಪ ಪೂಜಾರಿ ಹಾಗೂ ತಂಡದವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು ಹಾಗೂ ಪ್ರತಿ ತಿಂಗಳು 3-4 ಬಾರಿ ಆಗಮಿಸಿ ಮಕ್ಕಳಿಗೆ ಇನ್ನೂ ಇದರ ಅರಿವು ಮೂಡಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಲೆಯ ಸಹ-ಶಿಕ್ಷಕರಾದ ದೊಡಪ್ಪ ಕೋಣಿನ್,ಪ್ರತಾಪ್ ಪವರ್,ಸಾಹೇಬಗೌಡ ಮುರಡಿ,ಸಮೀರಪಟೇಲ್,ಶೀಮತಿ ಭುವನೇಶ್ವರಿ,ಸಿದ್ದಮ್ಮ,ಲಕ್ಷ್ಮೀ,ರಾಜಮ್ಮ,ದೀಪಾ,ಮಂಜುಳಾ,ನೂರಜಾಬೇಗಂ ಹಾಗೂ ವಿದ್ಯಾರ್ಥಿ ಬಳಗದವರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.