ಕೊಲ್ಯ , ಚೇಳಾೖರು , ಮಂಗಳೂರು , ಜನವರಿ 16: ಕೊಲ್ಯ ಶ್ರೀ ಜಾರಂದಾಯ ಧೂಮಾವತಿ ಪರಿವಾರ ದೈವಗಳ ವಾರ್ಷಿಕ ಜಾತ್ರೆಯು ವಿಜೃಂಭಣೆಯಿಂದ ಜರುಗುತ್ತಿದೆ. ದಿನಾಂಕ 14 ರಂದು ವಿದ್ಯುಕ್ತವಾಗಿ ಧ್ವಜಾರೋಹಣ ಗೊಂಡು ಮೊನ್ನೆ ದಿನಾಂಕ 15 ರಂದು ಜಾರಂದಾಯ ಬಂಟ, ಧೂಮಾವತಿ ಬಂಟ ಹಾಗೂ ಮಹಿಸಂದಾಯ ದೈವಗಳ ಮಾಣಿಚ್ಚಿಡಿ , ಕೋಲದಿಚ್ಚಿಡಿ , ಬಂಡಿ ಸವಾರಿ , ಬಂಡಿದ ಬಲಿನೇಮ ಜರುಗಿ ದೈವಗಳು ಸಮಸ್ತ ಭಕ್ತರಿಗೆ ಅಭಯವನ್ನಿತ್ತವು. ಊರ ಪರಊರ ಸಹಸ್ರಾರು ಭಕ್ತಾಭಿಮಾನಿಗಳು ದೈವಸ್ಥಾನಕ್ಕೆ ಆಗಮಿಸಿ ಶ್ರೀ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಧನ್ಯರಾದರು. ನಿನ್ನೆ ದಿನಾಂಕ 16 ರಂದು ಸಂಜೆ ಬೆಟ್ಟು ಗದ್ದೆಯಲ್ಲಿ ಚೆಂಡು ಆಟ ಜರುಗಿ ನಂತರ ಮಯಂದಾಲೆ ನೇಮ ಜರುಗಲಿದೆ. ನಂತರ ಶ್ರೀ ಜಾರಂದಾಯ ಧೂಮಾವತಿ ಮಾಣಿಚ್ಚಿಡಿ ಯಲ್ಲಿ ಧ್ವಜಾವರೋಹಣಗೊಂಡು ಪೂರ್ವಜರ ಕಟ್ಟಳೆಯಂತೆ; ಕಾರಣಾಂತರದಿಂದ ಸ್ಥಗಿತಗೊಂಡಿರುವ ಜಾರಂದಾಯ ಧೂಮಾವತಿ ದೈವಗಳ ಇಷ್ಟದ ಅಧಿಕಾರಿ ಚಾವಡಿಯಲ್ಲಿ “ಕೊಂಡೆ ಪೆರ್ ” ಕುಡಿದು “ಅಧಿಕಾರಿ ಚಾವಡಿ” ಯಲ್ಲಿ “ಅನ್ನ ಸಂತರ್ಪಣೆ ” ನಂತರ “ಚಾವಡಿ ನೇಮ” ಸ್ವೀಕರಿಸಿ ಸಮಸ್ತ ಸೇವಕ ವರ್ಗಕ್ಕೆ ಅಭಯಕೊಟ್ಟು ದೈವಸ್ಥಾನಕ್ಕೆ ನಿರ್ಗಮಿಸುವುದು ಪೂರ್ವಜರ ಕಟ್ಟು, ಅದೇ ಪೂರ್ವಜರ ಕಟ್ಟಿನಂತೆ ಮತ್ತೆ “ಕೊಲ್ಯದ ಆಯನ” ವೈಭವಯುತವಾಗಿ ಜರುಗಬೇಕೆಂಬುದು ಸಮಸ್ತ ಭಕ್ತರ ಆಶಯ. ಶ್ರೀ ದೈವಗಳು ಮುಂದಿನವರ್ಷಗಳಲ್ಲಿ ಈ ಪೂರ್ವಜರ ಕಟ್ಟಳೆಯನ್ನು ನೆರವೇರಿಸಿಕೊಡಬೇಕಾಗಿ ಸಮಸ್ತ ಭಕ್ತರ ಭಕ್ತಿಪೂರ್ವಕ ಪ್ರಾರ್ಥನೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.