ಮೈಸೂರು:- ಜ17. ನಗರದ ಮಾನಸ ಗಂಗೋತ್ರಿಯ ಜಯಚಾಮರಾಜೇಂದ್ರ ತಾಂತ್ರಿಕ ಕಾಲೇಜು ಮುಂಭಾಗ ಹಾಗೂ ಮೈಸೂರು-ಕೆ.ಆರ್.ಎಸ್. ರಸ್ತೆಯ ಇ.ಎಸ್.ಐ. ಆಸ್ಪತ್ರೆ ಎದುರಿಗೆ ಇರುವ ಬಸ್ ನಿಲ್ದಾಣಗಳಲ್ಲಿ ಜೆ.ಕೆ.ಟೈರ್ ಕಂಪೆನಿಯ ವತಿಯಿಂದ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸುವಂತೆ ಮೈಸೂರು ಮಹಾ ನಗರಪಾಲಿಕೆಯು ಸದರಿ ಸಂಸ್ಥೆಗೆ ಆದೇಶ ನೀಡಿದೆ.ಜೆ.ಕೆ.ಟೈರ್ ಸಂಸ್ಥೆಯ ವತಿಯಿಂದ ಮಾನಸ ಗಂಗೋತ್ರಿಯ ಜೆ.ಸಿ.ಇ. ಬಳಿ ಹಾಗೂ ಕೆ.ಆರ್.ಎಸ್. ರಸ್ತೆಯ ಇ.ಎಸ್.ಐ. ಆಸ್ಪತ್ರೆ ಬಳಿ
ಇರುವ ಬಸ್ ನಿಲ್ದಾಣಗಳಲ್ಲಿ ಆಂಗ್ಲ ಭಾಷಾ ನಾಮಫಲಕಗಳನ್ನು ಅಳವಡಿಸಲಾಗಿದೆ ಕನ್ನಡ ಭಾಷೆಯ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಡಾ.ಭೇರ್ಯ ರಾಮಕುಮಾರ್ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ೧೯-೧೨-೨೦೨೨ ರಂದು ದೂರು ನೀಡಿದ್ದರು. ಸದರಿ ದೂರನ್ನು ಪರಿಶೀಲಿಸಿದ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್ ಅವರು ಎರಡೂ ಬಸ್ ನಿಲ್ದಾಣಗಳಲ್ಲಿ ಜೆ.ಕೆ.ಟೈರ್ ಸಂಸ್ಥೆಯು ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಬಳಸಲು ಸೂಕ್ತ ಕ್ರಮಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಹಾಗೂ ಮೈಸೂರು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.