ಹನೂರು: ಗ್ರಾಮ ಪಂಚಾಯತಿಯಲ್ಲಿ ಗೆಲುವು ಸಾದಿಸಿ ಒಂದು ವರ್ಷಗಳು ಕಳೆದರೂ ಸಹ ವಾರ್ಡಿನ ಸದಸ್ಯ ಸೆಲ್ವ ಅವರು ತಿರುಗಿಯೂ ನೋಡಿಲ್ಲ ನಮ್ಮ ವಾರ್ಡಿಗೆ ಬಂದರೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದು ಸಂದನ ಪಾಳ್ಯ ಗ್ರಾಮದ ಮಾದಿಗ ಸಮುದಾಯ ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂದನ ಪಾಳ್ಯ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ಮಾತನಾಡಿದ ಮಹಿಳೆಯರು ಚುನಾವಣೆಯ ಸಂದರ್ಭದಲ್ಲಿ ಮತ ಕೇಳಲು ಅಕ್ಕಂದಿರೇ ತಾಯಂದಿರೇ ಎಂದು ಸುಳ್ಳು ಭರವಸೆ ಗಳನ್ನು ನೀಡಿ ನಿಮ್ಮ ವಾರ್ಡ್ ಅನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಇಲ್ಲ ಸಲ್ಲದ ಪೊಳ್ಳು ಭರವಸೆಗಳನ್ನು ನೀಡಿ ಗೆಲುವು ಸಾಧಿಸಿದ್ದರು.
ಆದರೆ ಒಂದು ವರ್ಷ ಕಳೆದರೂ ಸಹ ಇಂದಿಗೂ ನಮ್ಮ ವಾರ್ಡಿನ ಕಡೆ ಮುಖ ಮಾಡಿಲ್ಲ, ನಮ್ಮ ಸಮಸ್ಯೆ ಗಳನ್ನು ಬಗೆಹರಿಸದೆ ಅವರಿವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡು ಓಡಾಡುತ್ತಿದ್ದಾರೆ, ಮೊನ್ನೆ ಗ್ರಾಮ ಪಂಚಾಯತಿ ಆವರಣದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷ ಉಪಾಧ್ಯಕ್ಷ ರ ಮೇಲೆ ಗ್ರಾಮ ವಾರ್ಡ್ಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನೆ ಮಾಡಿದ್ದಾರೆ.
ಆದರೆ ವರ್ಷ ಕಳೆದರೂ ಮಾರ್ಟಳ್ಳಿ ಗ್ರಾಮ ಪಂಚಾಯತಿಯಲ್ಲಿ ನಮ್ಮ ವಾರ್ಡ್ ಹಿಂದುಳಿದಿದೆ, ಅಧಿಕಾರಿಗಳ ಮೇಲೆ ಆರೋಪ ಮಾಡಿಕೊಂಡಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ವಾರ್ಡ್ ಗೆ ಬಂದರೆ ಅವರಿಗೆ ಛೀಮಾರಿ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು,
ಗ್ರಾಮ ಪಂಚಾಯತಿಯಲ್ಲಿ ನಮ್ಮ ವಾರ್ಡಿಗೆ ಸಹಕರಿಸುತ್ತಿಲ್ಲ ಹಣ ದುರುಪಯೋಗ ಮಾಡಿದ್ದಾರೆ ಎಂದು ಹೇಳುವ ಸದಸ್ಯ ಸೆಲ್ವ ಅವರು ಒಬ್ಬ ಜನಪ್ರತಿನಿದಿಯಾಗಲು ಅನರ್ಹ,ನಮ್ಮ ವಾರ್ಡಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿಲ್ಲ,ಪಂಚಾಯತಿ ಆವರಣದಲ್ಲಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿರುವುದು ಸುಳ್ಳು,ಮಾರ್ಟಳ್ಳಿ ಗ್ರಾಮ ಪಂಚಾಯತಿಯಲ್ಲಿ ಎಲ್ಲಾ ವಾರ್ಡಿಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಆದರೆ ನಮ್ಮ ವಾರ್ಡ್ ನ ಸದಸ್ಯ ಇಲ್ಲ ಸಲ್ಲದ ಆರೋಪ ಗಳನ್ನು ಮಾಡಿಕೊಂಡು ಸಾಬೂಬು ಹೇಳುತ್ತಿದ್ದಾನೆ ಎಂದು ಸದಸ್ಯನ ವಿರುದ್ಧ ಮಹಿಳೆಯರಾದ ಕಾವೇರಿ, ಕಾವೇರಿ, ವಲ್ಲಿಯಮ್ಮ,ಸರಸ,ರಾಣಿ,ಶಾಂತಮ್ಮ,ಕರ್ಪಮ್ಮ,ಕಮಲಮ್ಮ,ತಮಲಿ,ಸತ್ಯ ಹಾಗೂ ಇನ್ನಿತರರು ಆಕ್ರೋಶ ಹೊರ ಹಾಕಿದರು. ವರದಿ:ಉಸ್ಮಾನ್ ಖಾನ್