ಜಗದಲಿ ಎಲ್ಲವೂ ಇರಲೂ
ಮನಸು ಬರಿ ಬರಿದು
ಕಣ್ಣ ಬಿಂಬಕೂ ಎಟುಕದ ದೂರ
ಉಸಿರನು ಮೀರಿದ ಸ್ನೇಹದಿ ಕಾಣೆಯಾಗಿದೆ
ಮನಸು ಹುಡುಕುವ ಸ್ನೇಹ
ಮನಸನೆ ಬಯಸಿ ಬಂದ ಸ್ನೇಹ
ಮನದಿ ಮೂಡಿದ ಸ್ನೇಹ
ಜನುಮಜನುಮಕೂ ಅಗಲದ ಬಂಧವಾಗಿದೆ
ನನ್ನ ಕನಸಿನ ನಂದನದಿ
ತನ್ನ ರಂಗವಲ್ಲಿಯನೇ ಬಿತ್ತಿ
ಮರುಜನುಮಕೂ ಬೇಕೆಂದು ಬಯಸುವ
ಬಂಧದಿ ಬಂಧನವಾಗಿದೆ
ಅದು ಒಲವಿನ ಸಂಬಂಧ
ಮಮತೆಯ ಅನುಬಂಧ
ಜೀವನವೆಂಬ ಬಂಧದ
ಹೃದಯ ಸಂಬಂಧ
ರಚನೆ:ಲೋಹಿತೇಶ್ವರಿ ಎಸ್.ಪಿ
ಚಳ್ಳಕೆರೆ(ತಾ),ಚಿತ್ರದುರ್ಗ