ಪಾವಗಡ:ತಾಲ್ಲೂಕಿನ ಗ್ರಾಮದ ಪೋಲೀಸ್ ಠಾಣೆಯ ಮೇಲ್ಚಾವಣಿಯ ಸಿಮೆಂಟ್ ಕುಸಿದು ಕಂಪ್ಯೂಟರ್ ಜಖಂಗೊಂಡಿದೆ.
ಬೆಳಿಗ್ಗೆ ಪೋಲೀಸ್ ಪೇದೆ ಚೌಡಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೇಲ್ಚಾವಣಿ ಸಿಮೆಂಟ್ ಚೂರು ಕುಸಿದು ಬಿದ್ದಿದೆ.ತಕ್ಷಣವೇ ಎಚ್ಚೆತ್ತುಕೊಂಡ ಮತ್ತೊಬ್ಬ ಪೇದೆ ಚೌಡಮ್ಮರನ್ನು ಕೊಠಡಿಯಿಂದ ಹೊರ ಕರೆದು ಬಂದ ತಕ್ಷಣ ಮತ್ತಷ್ಟು ಚೂರುಗಳು ಬಿದ್ದು,ಅಲ್ಲಿದ್ದ ಕಂಪ್ಯೂಟರ್ ಜಖಂಗೊಂಡಿದೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪೋಲೀಸ್ ಕಟ್ಟಡವು ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು,ಶಿಥಿಲಾವಸ್ಥೆ ತಲುಪಿದೆ. ಮೇಲ್ಚಾವಣಿಯ ಬಹುಭಾಗ ಇದೇ ರೀತಿ ಶಿಥಿಲಗೊಂಡಿದ್ದು,ಸಿಮೆಂಟ್ ಕಳಚಿಕೊಳ್ಳುತ್ತಿದೆ. ಭಯದ ವಾತಾವರಣದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಸಂಬಂಧಿಸಿದವರು ಶೀಘ್ರವಾಗಿ ನೂತನ ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಠಾಣೆಯ ಸಿಬ್ಬಂದಿ.