ಸಿರುಗುಪ್ಪ:ತಾಲೂಕಿನಾದ್ಯಂತ ಅಕ್ರಮ ಮಧ್ಯ ಮಾರಾಟ ಎಗ್ಗಿಲ್ಲದಂತೆ ಸಾಗಿದ್ದು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ
ಅವರಿಗೆ ಯಾರು ಏನೇ ಹೇಳಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ,ಅಲ್ಲದೇ ಅಕ್ರಮ ಮಾರಾಟ ಮತ್ತು ಸಾಗಾಣಿಕೆ ತಡೆಗಟ್ಟುವ ಬದಲು ಕುಮ್ಮಕ್ಕು ನೀಡುತ್ತಿದ್ದು ಅಕ್ರಮದಾರರಿಗೆ ಆಂತರಿಕವಾಗಿ ಸಹಕಾರ ನೀಡುತ್ತಿದ್ದಾರೆ ಅವರೊಂದಿಗೆ ಮಾಮೂಲು ಪಡೆಯುತ್ತಿದ್ದಾರೆಂಬ ದೂರು ಕೇಳಿ ಬರುತ್ತಿವೆ. ಪ್ರತಿಯೊಂದು ಮದ್ಯ ಮಾರಾಟದ ಅಂಗಡಿಯಲ್ಲಿ ಯಾರೂ ಬಿಲ್ ಕೊಡುತ್ತಿಲ್ಲ, ಮುದ್ರಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಇದು ಎಲ್ಲಾ ಗೊತ್ತಿದ್ದರೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಎಲ್ಲೆಂದರಲ್ಲಿ ಮಾತಾಡಿಕೊಳ್ಳುವುದು ಇದೀಗ ಬಹಿರಂಗವಾಗಿದೆ.
ನಗರದಲ್ಲಿ ಹಾದು ಹೋಗಿರುವ 150 ಎ ಹೆದ್ದಾರಿ ಸಿಂಧನೂರು ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮ ಸಾಕಾಣಿಕೆಯಲ್ಲಿ ಮಧ್ಯದ ಟೆಟ್ರಾ ಪ್ಯಾಕೆಟ್ಟುಗಳು ಮತ್ತು ಬಾಟಲುಗಳು ತುಂಬಿರುವ ಕಾರ್ಟೂನ್ ಬಾಕ್ಸ್ಗಳನ್ನು ಹೇರಿಕೊಂಡು ಎಲ್ಲರಿಗೂ ಕಾಣುವಂತೆ ರಾಜಾರೋಷವಾಗಿ ಮಧ್ಯಾಹ್ನದ ಸಮಯದಲ್ಲಿಯೇ ಹೆದ್ದಾರಿಯಲ್ಲಿ ಸಾಗಿಸುವ ದೃಶ್ಯ ಇದೀಗ ಸರ್ವೇಸಾಮಾನ್ಯ
ಕೆಡಿಪಿ ಸಭೆಯೊಂದರಲ್ಲಿ ಕ್ಷೇತ್ರದ ಶಾಸಕರು ಅಬಕಾರಿ ಸಿಪಿಐ ಕೀರ್ತನ ಇವರನ್ನು ಅಕ್ರಮ ಮಧ್ಯ ಮಾರಾಟ ಅವ್ಯಾಹುತವಾಗಿ ನಡೆಯುತ್ತಿರುವ ಬಗ್ಗೆ ನಮಗೆ ದೂರು ಬಂದಿದ್ದು ಪ್ರತಿಯೊಂದು ಹಳ್ಳಿಯ ಡಬ್ಬಾ ಅಂಗಡಿಗಳಲ್ಲಿ ಸಹ ಮದ್ಯ ಮಾರಾಟದ ಬಗ್ಗೆ
ನಮಗೆ ದೂರುಗಳು ಬಂದಿದ್ದು ಈ ಬಗ್ಗೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಸಭೆಯಲ್ಲಿ ನಿಲ್ಲಿಸಿ ಎಚ್ಚರಿಕೆಯ ಸೂಚನೆ ನೀಡಿದ್ದರು.
ಅಲ್ಲದೆ ಕೆಲದಿನಗಳ ಹಿಂದೆ ಸಾರ್ವಜನಿಕರೂ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ ಬೆರಳೆಣಿಕೆ ಪ್ರಕರಣಗಳನ್ನು ದಾಖಲು ಮಾಡಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ದರು ಆದರೂ ಕ್ರಮ ತೆಗೆದು ಕೊಳ್ಳುತ್ತಿಲ್ಲ ಅಂದರೆ ಇಲ್ಲಿ ಅಕ್ರಮ ಮಧ್ಯ ಮಾರಾಟ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂಬುದು ಊಹಿಸಲೂ ಅಸಾಧ್ಯವಾಗಿದೆ.
ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ ತೆರಿಗೆ ಹಣವನ್ನು ಸಂಬಳ ರೂಪವಾಗಿ ಪಡೆದಿರುವ ಅಧಿಕಾರಿಗಳು ಕರ್ತವ್ಯ ಹೀನರಾಗಿರೋದಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ಎಲ್ಲೆಡೆ ವ್ಯಕ್ತವಾಗುತ್ತಿದೆ.
-ಕರುನಾಡ ಕಂದ