ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಜಯ ಸಂಕಲ್ಪ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಡಾಕ್ಟರ್ ದತ್ತೇಶ್ ಕುಮಾರ್ ಮನವಿ

ಹನೂರು :ನಮ್ಮ ಪಕ್ಷವು ಪ್ರಪಂಚದಲ್ಲೆ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ್ದು ಈಗಾಗಲೇ ನಮ್ಮ‌ ಪ್ರಧಾನಿಯವರು ಅತ್ಯುತ್ತಮವಾದ ಕೆಲಸ ಮಾಡುತ್ತಿದ್ದು ವಿಶ್ವವೇ ತಿರುಗಿ ನೋಡುವಂತಾಗಿದೆ ಎಂದು ಬಿ ಜೆ ಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಡಾಕ್ಟರ್
ದತ್ತೇಶ್ ಕುಮಾರ್ ತಿಳಿಸಿದರು .
ಹನೂರು ಪಟ್ಟಣದ ಬಿ.ಜೆ.ಪಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನವರಿ ಎರಡನೆಯ ತಾರೀಖಿನಿಂದ ಹನ್ನೆರಡರನೇ ತಾರೀಖಿನವರಿಗೆ ಬೂತ್ ವಿಜಯ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆ ಹಾಗೆಯೇ ಬೂತ್ ವಿಜಯ ಸಂಕಲ್ಪ ಅಭಿಯಾನವನ್ನು ಹತ್ತು ವಿಭಾಗಗಳಲ್ಲಿ
312 ಮಂಡಲದಲ್ಲಿಯು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡರವರು ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಚಾಲನೆ ನೀಡುವರು ನಮ್ಮ ಜಿಲ್ಲೆಯ ಜವಾಬ್ದಾರಿಯನ್ನು ಜಯಸುಂದರ್ ರವರಿಗೆ ನೀಡಿದ್ದಾರೆ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅವುಗಳಲ್ಲಿ ಅಬಾ ಕಾರ್ಡ್,ಕಿಸಾನ್ ಸಮ್ಮಾನ್,ಇದರಲ್ಲಿ ರೈತನ ಖಾತೆಗೆ ಹತ್ತು ಸಾವಿರ ಹಣ ವರ್ಗಾವಣೆ ಮಾಡುವ ಕಾರ್ಯ ಶೂನ್ಯ ಮೊತ್ತದಲ್ಲಿ ಜನಧನ್ ಖಾತೆ ತೆರೆಯಲು ಅವಕಾಶ ನಮ್ಮ ಮೋದಿಯವರ ಸಾಧನೆ,ಮೇಕ್ ಇನ್ ಇಂಡಿಯಾ ,ಸ್ಮಾರ್ಟ್ ಸಿಟಿ ಪ್ರಧಾನ ಮಂತ್ರಿ ಅವಾಸ್ ಯೋಜನೆ,ಮುದ್ರ ಯೋಜನೆ ,ಉಜ್ವಲ್ ಯೋಜನೆ ಸ್ವಚ್ಛ ಭಾರತ್ ಯೋಜನೆ ಇಂತಹ ಹಲವಾರು ಯೋಜನೆಯನ್ನು ನೀಡಿದ ಸರ್ಕಾರ ನಮ್ಮದು ಮುಂದೆಯೂ ಅಭಿವೃದ್ಧಿ ಹೊಂದುವಂತೆ ಮಾಡುತ್ತೇವೆ ,ರಾಜ್ಯದಲ್ಲಿ ಕಮಲ ಅರಳಿಸುವುದೇ ನಮ್ಮ ಮುಂದಿನ ಗುರಿ ನೂರೈವತ್ತಕ್ಕೂ ಹೆಚ್ಚಿನ ಸೀಟನ್ನು ಪಡೆದು ಸರ್ಕಾರ ರಚಿಸಲು ನಾವು ಬದ್ದರಾಗಿದ್ದೇವೆ,ಈಗಾಗಲೇ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳ ಮನೆ ಹಾಗೂ ಮನಸ್ಸನ್ನು ಮುಟ್ಟುತ್ತೆವೆ ಒಂದು ಕೋಟಿ ಕರ ಪತ್ರವನ್ನು ಹಂಚಲು,ಗೋಡೆಗಳ ಮೇಲೆ ಬರಹ ಬರೆಯುತ್ತೇವೆ ಹಾಗೇನೇ ಎಲ್ಲಾ ಚುನಾಯಿತ ೨೫೩ ಬೂತ್ ನಲ್ಲೂ ಸಕ್ರಿಯವಾಗಿದ್ದೆವೆ ನಿರಂತರವಾಗಿ ಕಾರ್ಯಚಟುವಟಿಕೆ ಮಾಡ್ತಿದ್ದೇವೆ ಏಳು ಮೋರ್ಚದ ಅಧ್ಯಕ್ಷರು ಸೇರಿದಂತೆ ‌ಕಾರ್ಯಕರ್ತರೆಲ್ಲ ದುಡಿದಿದ್ದೇವೆ ,ಸವಲತ್ತು ಪಡೆದ ಪಲನುಭವಿಗಳಿಗೆ ಆದೇಶ ಪತ್ರ ನೀಡಲು ಪ್ರಯತ್ನಿಸುತ್ತೇವೆ ಜಿಲ್ಲಾ ಪಂಚಾಯತಿ‌ ಕ್ಷೇತ್ರವನ್ನು ಮಹಾ ಶಕ್ತಿಕೇಂದ್ರವೆಂದು ಕರೆಯುತ್ತೇವೆ ನಮ್ಮಲ್ಲಿ ಎಲ್ಲಾರು ಒಗ್ಗಟ್ಟಿನಿಂದ ಜೊತೆಯಲ್ಲಿದ್ದೆವಿ ಮುಂದೆಯು ಗೆದ್ದು ಬರುತ್ತೆವಿ ಎಂದರು ಯುವ ಮುಖಂಡರಾದ ಡಾಕ್ಟರ್ ಪ್ರೀತನ್ ಮಾತನಾಡಿ ಪ್ರತಿ ಮನೆಯಲ್ಲಿಯೂ
ಬಿ ಜೆ ಪಿ ಬಾವುಟ ಹಾರಿಸುತ್ತೇವೆ ಎಂದರು
ಬೂತ್ ಕಮಿಟಿ ಮಾಡಿ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆ ಮನೆಮನೆಗೂ ತೆರಳಿ ಪಕ್ಷದ ನಾಯಕರಾದಿಯಾಗಿ ಎಲ್ಲಾರೂ ಕಾರ್ಯ ಪ್ರವೃತ್ತರಾಗಿದ್ದೇವೆ ಮುಂದಿನ ದಿನಗಳಲ್ಲಿ ಹನೂರು ಕ್ಷೇತ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ನಾವು ಸಪಲರಾಗುತ್ತೇವೆ ಎಂದರು ಇದೇ ಸಮಯದಲ್ಲಿ ಯುವ ಮುಖಂಡರಾದ
ನಿಶಾಂತ್ ಮಾತನಾಡಿ ಕ್ಷೇತ್ರದಲ್ಲಿ ಶೇಕಡಾ ನೂರರಷ್ಟು ಬೂತ್ ಗಳಲ್ಲಿ ಕಾರ್ಯಕರ್ತರು ಪ್ರತಿದಿನ ಕಾರ್ಯಪ್ರವೃತ್ತರಾಗಿದ್ದಾರೆ ,ಮಾದ್ಯಮದವರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಅದ್ದರಿಂದ ನಿಮ್ಮಗಳ ಸಹಕಾರ ಮುಖ್ಯ ಎಂದು‌ ತಿಳಿಸಿದರು ಇದೇ ಸಮಯದಲ್ಲಿ ಜಿಲ್ಲಾ ಮಾಧ್ಯಮ ವಕ್ತಾರರಾದ
ಬಸವರಾಜು ಮಾತನಾಡಿ ವಿಜಯ ಸಂಕಲ್ಪ ಯಾತ್ರೆಯನ್ನು ಮಾಡಲಾಗಿದೆ ಪ್ರತಿ ಬೂತ್ ನಲ್ಲಿಯು ಪೇಜ್ ಪ್ರಮುಖರನ್ನು‌ ಗುರುತ್ತಿಸಿ ಅವರಿಗೆ ಜವಾಬ್ದಾರಿ ನೀಡಲಾಗಿದೆ ಪಕ್ಷದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ಸಹ ಪೇಜ್ ಪ್ರಮುಖ್ ನವರ ಕಾರ್ಯ ಬಹಳ ಮುಖ್ಯ. ಪಕ್ಷವು ಜನರ ಮನಸ್ಸಿನಲ್ಲಿದ್ದರೆ ಅದು ನೂರೈವತ್ತು ಸೀಟ್ ಪಡೆಯುತ್ತಿವಿ ಎಂದು ತಿಳಿಸಿದರು . ಇದೇ ವೇಳೆ ಹಾಜರಿದ್ದ ಸಿದ್ದಪ್ಪ ಮಾತನಾಡಿ ಪೊಳ್ಳು ಆಶ್ವಾಸನೆ ನೀಡದೆ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತ ಕೆಳಲು ನಾವು ಬೂತ್ ಅಭಿಯಾನ ಮಾಡುತ್ತೇವೆ ಅದರ ಫಲವಾಗಿ ಗೆಲುವನ್ನು ಸಾದಿಸಲು ಸುಲಭವಾಗುತದೆ , ಇದೇ ಸಮಯದಲ್ಲಿ,ಜಯ ಸುಂದರ್ , ಮಂಡಲ ಅಧ್ಯಕ್ಷ ವೀರಭದ್ರ ,ಮಾಧ್ಯಮ ಸಂಚಾಲಕ ಮಧುಸೇರಿದಂತೆ ಹಲವರು ಹಾಜರಿದ್ದರು
ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ