ಇಂಡಿ:ಗ್ರಾಮೀಣ ಭಾಗದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಿದೆ ಎಂದು ಕಂದಾಯ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು.
ತಾಲೂಕಿನ ಪಡನೂರ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯ ಮೈದಾನದಲ್ಲಿ ನಡೆದ ಅಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಹಶೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿ ಜನರ ಮನೆ ಬಾಗಲಿಗೆ ಆಡಳಿತವನ್ನು ತರುವ ನಿಟ್ಟಿನಲ್ಲಿ ಗ್ರಾಮ
ವಾಸ್ತವ್ಯ ಪೂರಕವಾಗಿದೆ ಎಂದರು ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಕೇಳಿಕೊಂಡರು ಮತ್ತು ಅರ್ಜಿ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಭೂ ದಾಖಲೆ ಇಲಾಖೆ I8, ತಾ.ಪಂ 8, ಹೆಸ್ಕಾಂ 05, ಲೋಕೋಪಯೋಗಿ 2, ಕೃಷಿ 05, ಪಶು ಇಲಾಖೆ 02, ಕೆ.ಎಸ್.ಆರ್.ಟಿ.ಸಿ 1. ಜಿ.ಪಂ ಇಂಜಿನಿಯರಿಂಗ 02, ಪೋಲಿಸ್ I, ಆರೋಗ್ಯ 1 ಪಂಚಾಯತ ರಾಜ್ 1, ಸಹಕಾರ 1, ಶಿಕ್ಷಣ 1, ವಿಕಲಚೇತನ 03 ಸೇರಿದಂತೆ ಒಟ್ಟು 68 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರು.
17 ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆಯ ಅಡಿ ಕಾರ್ಡು ವಿತರಿಸಲಾಯಿತು. ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ ಗಿರಣಿವಡ್ಡರ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಪಂಚಾಯತ ರಾಜದ ಆ.ರುದ್ರವಾಡಿ,ಸಣ್ಣ ನೀರಾವರಿಯ ಎಇಇ ಬಸವರಾಜ ಕೆರೂರ,ಸಿಡಿಪಿಓ ಸುಮಂಗಲಾ ಹಿರೇಮನಿ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ.ಇಂಡಿ ಸೇರಿದಂತೆ ವಿವಿಧ ಇಲಾಖಾ ಶಾಲಾ ಸಿಬ್ಬಂದಿ ಮತ್ತಿತರಿದ್ದರು.
ವರದಿ:ಅರವಿಂದ್ ಕಾಂಬಳೆ