ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಮತದಾರನ ಭಯ ಅಭ್ಯರ್ಥಿಗಳನ್ನು ಕಂಗೆಡಿಸಿದೆ ಕಾರಣ ಹಾಲಿ ಶಾಸಕರ ಕಾರ್ಯವೈಖರಿ ಬಹಳಷ್ಟು ಸಂಯಮಶೀಲತೆಯಿಂದ ಕೂಡಿದ ಮನೋಭಾವದ ವ್ಯಕ್ತಿತ್ವ ಆಕ್ರೋಶದ ಧೋರಣೆ ಅನುಸರಿಸದೆ ಜನರ ಮನಸ್ಸಿಗೆ ಹಿತಮಿತವಾಗಿ ಮಾತನಾಡಿ ಮತದಾರರನ್ನು ಓಲೈಸಿ ಕೊಂಡು ಮುನ್ನಡೆಯುವ ದಾರಿ ಶಾಸಕ ಶ್ರೀ ಮಹಾಂತೇಶ ಕೌಜಲಗಿಯವರದು ಇಂದು ಕಾಂಗ್ರೆಸ್ನನ ನಡೆಯಾದರೆ ಇನ್ನೂ ಭಾರತೀಯ ಜನತಾ ಪಕ್ಷದ ಮಾಜಿ ಶಾಸಕರಾದ ಶ್ರೀ ವಿ.ಆಯ್.ಪಾಟೀಲ ಹಾಗೂ ಶ್ರೀ ಜಗದೀಶ್ ಮೆಟಗುಡ್ಡ ಕಳೆದ ಚುನಾವಣೆಯಲ್ಲಿ ಇಬ್ಬರು ಕಣಕ್ಕಿಳಿದು ಮತದಾರರನ್ನು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ ಹೀಗಾಗಿ ಈ ಬಾರಿ ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪುಗಳನ್ನು ಹೇಗೆ ತಿದ್ದಿಕೊಂಡು ಮತದಾರನ ಬಳಿ ಹೋಗುತ್ತಾರೆನ್ನುವುದು ಯಕ್ಷ ಪ್ರಶ್ನೆಯಾಗಿದೆ ಜೊತೆಗೆ ಹೈಕಮಾಂಡ ಯಾರಿಗೆ ಟಿಕೆಟ್ ಎಂಬುದು ನಿಗೂಢವಾಗಿದೆ ಇದರ ಮಧ್ಯೆ ಕಳೆದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿರುವ ಚಾಕಚಕ್ಯತೆ ಮೆಟಗುಡ್ಡರವರಿಗೆ ಇದೆ ಜೊತೆಗೆ ನಿರಂತರ ಜನರೊಂದಿಗೆ ಸಂಪರ್ಕದಲ್ಲಿದ್ದಾರೆಂಬ ಗುಮಾನಿಯು ಕ್ಷೇತ್ರದಲ್ಲಿದೆ
ಶ್ರೀವಿ.ಆಯ್.ಪಾಟೀಲರೂ ಆಕಾಂಕ್ಷಿಗಳ ಪಟ್ಟಿಯಲ್ಲಿ ಹೆಸರಿದ್ದರೂ ಕ್ಷೇತ್ರದಲ್ಲಿ ಜನರ ಅಭಿಪ್ರಾಯ ನಿಗದಿಪಡಿಸಿದ ಹಳ್ಳಿಗಳಲ್ಲಿ ಮಾತ್ರ ಎಂಬಂತಾಗಿದೆ ಮೇಲ್ನೋಟಕ್ಕೆ ಮೂವರು ಅಭ್ಯರ್ಥಿಗಳೂ ಕ್ಷೇತ್ರದಲ್ಲಿ ಹೆಸರು ಮಾಡಿದವರೆ ಆದರೂ ಹಾಲಿ ಶಾಸಕ ಮಾಜಿ ಶಾಸಕ ಸೀಮಿತ ಪರಿಧಿಯಲ್ಲಿ ಪ್ರಬಲರಾಗಿದ್ದಾರೆ ಈ ಮೂವರಲ್ಲಿ ಮಾಜಿ ಕಲಿ ಶ್ರೀ ಜಗದೀಶ್ ಮೆಟಗುಡ್ಡರವರಿಗೆ ಕಳೆದ ಚುನಾವಣೆಯಲ್ಲಿ ಸೋತು ಅನುಭವ ಮೊದಲ ಚುನಾವಣೆಯಲ್ಲಿ ಗೆದ್ದ ಅನುಭವ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂಬುದು ಸದ್ಯದ ಲೆಕ್ಕಾಚಾರ
ಟಿಕೆಟ್ ಖಾತ್ರಿಯಾಗುತ್ತಿದ್ದಂತೆ ಜನರ ಬಳಿ ಮತಯಾಚನೆಗೆ ಹೋಗುವ ತಯಾರಿ ಇನ್ನೂ ಕ್ಷೇತ್ರದಲ್ಲಿ ತಾಲೀಮು ನಡೆಯದಿರುವುದೇ ಮತದಾರನ ಭಯವು ಮೂರು ಪಕ್ಷಗಳಲ್ಲಿ ಮನೆಮಾಡಿದೆ ಹೀಗಾಗಿ ಅನುಭವವೇ ಅಮೃತವಾಗುವ ಸಾಧ್ಯತೆಗಳು ದಟ್ಟವಾಗಿವೆ ಜನರ ಪೆವರೇಟ ಶ್ರೀ ಜಗದೀಶ್ ಮೆಟಗುಡ್ಡರವರಿಗೆ ಗೆಲುವು ಒಲಿದರೆ ಅಚ್ಚರಿಯಿಲ್ಲ ಎಂಬಂತಾಗಿದೆ ಆದರೂ ಮುಂದಿನ ತಾಲೀಮು ತಯಾರಿಗಳು ಕ್ಷೇತ್ರದಲ್ಲಿ ನಡೆದರೆ ಮಾತ್ರ ಮತದಾರನ ಭಯ ಕಡಿಮೆಯಾಗಬಹುದು ಇಲ್ಲವಾದರೆ ಕೊನೆಯ ಕ್ಷಣದವರೆಗೂ ಗೆಲುವು ಯಾರದಾಗುತ್ತದೆ ಎಂಬುವುದು ಈ ಬಾರಿ ಸುಲಭವಾಗಿಲ್ಲ ಎಂಬುದು ಸುಸ್ಪಷ್ಟವಾದ ಸಂದೇಶ ಮತದಾರ ಅಭ್ಯರ್ಥಿಗಳಿಗೆ ಕೊಟ್ಟಿದ್ದಾನೆ ಎಂಬುವುದು ಸಧ್ಯದ ಸನ್ನಿವೇಶ ಎಂದು ಬೈಲಹೊಂಗಲದಲ್ಲಿ ಜನರ ಅಭಿಪ್ರಾಯವಾಗಿದೆ.
ವರದಿ:ದಿನೇಶಕುಮಾರ ಅಜಮೇರಾ