ಹನೂರು :ವಿಧಾನ ಸಭಾ ಕ್ಷೇತ್ರವು ವ್ಯಾಪ್ತಿಯಲ್ಲಿ ದೊಡ್ಡದಾಗಿದ್ದು ಈಗಿನ ಸರ್ಕಾರ ನೀಡುತ್ತಿರುವ ಅನುದಾನವು ಸಾಲುತ್ತಿಲ್ಲ ನಮ್ಮ ಕ್ಷೇತ್ರವು ಸುಮಾರು 175 ಕಿಲೋಮೀಟರ್ ವ್ಯಾಪ್ತಿಯಿದ್ದು ನಾನು ಇಲ್ಲಿಯತನಕ ಮಾಡಿರುವ ಕಾಮಗಾರಿಗಳು ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಮಂಜೂರಾದ ಕಾಮಗಾರಿಗಳು ಹಾಗಾಗಿ ಬಿ ಜೆ ಪಿ ಸರ್ಕಾರವು ನಮ್ಮ ಕ್ಷೇತ್ರಕ್ಕೆ ಯಾವುದೇ ಅನುದಾನವನ್ನು ನೀಡಿಲ್ಲ ಎಂದು ಶಾಸಕರಾದ ಆರ್.ನರೇಂದ್ರ ತಿಳಿಸಿದರು .
ಕ್ಷೇತ್ರ ವ್ಯಾಪ್ತಿಯ ಲೊಕ್ಕನಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಸಿಸಿರಸ್ತೆ ಗುದ್ದಲಿ ಪೂಜಾ ಮತ್ತು ಸಮುದಾಯ ಭವನಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ದಿನ ವಾಲ್ಮೀಕಿ ಸಮುದಾಯ ಭವನವು 1,25,00,000 ,ಲಕ್ಷ ,ಉದ್ದಟ್ಟಿ ಸಮುದಾಯ ಭವನ 5000000. ಹಾಗೂ ಸಿಸಿ ರಸ್ತೆಗಳಾದ ಲೊಕ್ಕನಳ್ಳಿ 1500000. ಜೀರಿಗೆಗದ್ದೆ 1000000.ಮಾವುತ್ತುರು ,1000000.ಉದ್ದಟ್ಟಿ,1000000.ಹಿರಿಯಂಬಲ ಎರಡು ರಸ್ತೆ 2000000, ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲಾಯಿತು .ಇವೆಲ್ಲದಕ್ಕೂ ಆರ್ ಡಿ ಪಿ ಆರ್ ಇಲಾಖೆ ವತಿಯಿಂದ ಸುಮಾರು ಇಪ್ಪತೈದು ಕೋಟಿ ಹಣ ಬಿಡುಗಡೆ ಮಾಡಿಸಿದ್ದು ಅದರಲ್ಲಿ ಎಲ್ಲಾ ಜನಾಂಗದ ಸಿಸಿರಸ್ತೆಗೆ ಹತ್ತುಕೋಟಿ ಹಣ ನೀಡಿದ್ದು ಇನ್ನುಳಿದ ಹದಿನೈದು ಕೋಟಿಹಣವನ್ನು ಮುಖ್ಯ ರಸ್ತೆಗಳಿಗೆ ವಿನಿಯೋಗಿಸಲಾಗಿದೆ ,ಸಾರ್ವಜನಿಕರ ಒತ್ತಾಸೆಯಂತೆ ಬಂಡಳ್ಲಿ ಮತ್ತು ತೆಳ್ಳನೂರು ಮುಖ ರಸ್ತೆ ,ಮಾರ್ಟಳ್ಳಿಯಲ್ಲಿ ನಾಲ್ಕುವರೆ ಕಿಲೋಮೀಟರ್ ರಸ್ತೆ ,ಭದ್ರಯನಹಳ್ಳಿಯಲ್ಲಿ ಒಂದುವರೆ ಕಿಲೋಮೀಟರ್ ,ಹಾಗೂ ಕೆ ವಿ ಎನ್ ದೊಡ್ಡಿ ಮತ್ತು ವೈಶಂಪಾಳ್ಯದಲ್ಲಿ ಮೆಲ್ಸೇತುವೆ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು .
ಇದೇ ಸಮಯದಲ್ಲಿ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಬಸವರಾಜು,ಮುಖಂಡರುಗಳಾದ ಚೇತನ್ ದೊರೈರಾಜು , ಜಗದೀಶ್ ,ಸತೀಸ್ ಕುಮಾರ್ ,ಅಂಕರಾಜು ,ಚಂದ್ರಪ್ಪ,ಮಾದೆವು ,ವಿನಯ್ ,ಕೆಂಪರಾಜು , ಹಾಗೂ ಅಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು .
ವರದಿ :ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.