ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಭಾಗದ ಪುರಾತನ ಸೂರ್ಯನಾರಾಯಣ ಗುಡ್ಡದಲ್ಲಿ ರಥಸಪ್ತಮಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡಿದ್ದು, ಭಕ್ತರು ಈ ಸುದಿನ ದಂದು ಆಗಮಿಸಿ ಸೂರ್ಯ ದೇವರ ಕೃಪೆಗೆ
ಪಾತ್ರರಾಗಬೇಕೆಂದು ದೇಗುಲದ ಸಮಿತಿಯವರು ತಿಳಿಸಿದ್ದಾರೆ.
ಸೂರ್ಯನಾರಾಯಣ ಗುಡ್ಡ ಮುಂಡಗೋಡದಲ್ಲಿ ಶ್ರದ್ದಾ ಭಕ್ತಿಯ ತಾಣವಾಗಿದ್ದು ಇಲ್ಲಿ ನೆಲೆನಿಂತಿರುವ ಕ್ಷೇತ್ರದ ದೈವ ಶ್ರೀ ಸೂರ್ಯನಾರಾಯಣ ಹಾಗೂ ಗುಡ್ಡದ ಆಂಜನೇಯ ದೇವರುಗಳು ಭಕ್ತರ ಅಭಿಶ್ಟವನ್ನು ಇಡೆರಿಸುತ್ತ ವಿರಾಜಮಾನರಾಗಿದ್ದಾರೆ.
ಸಮುದ್ರ ಮಟ್ಟದಿಂದ ಸರಿಸುಮಾರು 600 ಮೀಟರ್ ವರೆಗೆ ಎತ್ತರ ವಿರುವ ನ್ಯಾಸರ್ಗಿ ಸೂರ್ಯನಾರಾಯಣ ಗುಡ್ಡ ಪ್ರಾಕೃತಿಕವಾಗಿಯು ಭೌಗೋಳಕವಾಗಿ ಯು ಚಾರಣಕ್ಕ್ ಹೇಳಿ ಮಾಡಿಸಿದ ಸ್ಥಳವಾಗಿದೆ.