ಅಥಣಿ ತಾಲೂಕಿನ ಬಳವಾಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವತ್ತು ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಕಲ್ಲಪ್ಪ ಕುಂಬಾರ ಸರ ಅವರು ಮಾತನಾಡಿ ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಭಾರತವು ಆಗಸ್ಟ್ 15, 1947 ರಂದು ಸ್ವತಂತ್ರವಾದ ನಂತರ, ಆಗಸ್ಟ್ 29 ರಂದು, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕರಡು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯು ಸಂವಿಧಾನದ ಕರಡನ್ನು ಸಿದ್ಧಪಡಿಸಿ ನವೆಂಬರ್ 4, 1947 ರಂದು ವಿಧಾನಸಭೆಯಲ್ಲಿ ಮಂಡಿಸಿತು. ಇದನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು ಮತ್ತು ಅನೇಕ ಪರಿಷ್ಕರಣೆಗಳು ಮತ್ತು ತಿದ್ದುಪಡಿಗಳ ನಂತರ, ಭಾರತದ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು ಎಂದು ಹೇಳಿದರು.
ಶ್ರೀಶೈಲ ಪಾಟೀಲ ಅವರು ಮಾತನಾಡಿ ಗಣರಾಜ್ಯೋತ್ಸವ ದಿನವನ್ನುಇಡೀ ದೇಶವೇ ಸಂಭ್ರಮಿಸುತ್ತದೆ. ಈ ದಿನವು ದೇಶ ಸ್ವಾತಂತ್ರ್ಯೋತ್ತರ ಗಣರಾಜ್ಯ ದೇಶವಾದ ಐತಿಹಾಸಿಕ ದಿನ ಮತ್ತು ಸಂವಿಧಾನ ಜಾರಿಗೆ ಬಂದ ದಿನವಾಗಿದೆ. 2023ನೇ ಇಸವಿಯಲ್ಲಿ ಇರುವ ಭಾರತೀಯರಾದ ನಾವೆಲ್ಲರೂ ಜನವರಿ 26, ಈ ವರ್ಷದ ಮೊದಲ ರಾಷ್ಟೀಯ ಹಬ್ಬವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಹಾಗೂ ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಪರಸಪ್ಪ ಮುತ್ತೂರು ಹಾಗೂ ಸದಸ್ಯರು ಹಾಗೂ ಶಿಕ್ಷಕರಾದ ಎಸ್ ಎಸ್ ಗುಣದಾಳ ಹಾಗೂ ಗ್ರಾಮಸ್ಥರಾದ ಸಂಗಪ್ಪ ಹರೋಲಿ, ಗೌಡಪ್ಪ ಪಾಟೀಲ, ಸಿದ್ದು ತುಂಗಳ, ಸಂತೋಷ ಹರೋಲಿ, ಶಿವಾನಂದ ಅವಟಿ, ಅಮಿತ ಹರೋಲಿ, ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.
ವರದಿ: ಎಸ್ ವಿಶ್ವನಾಥ