ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಲಾಕೃತಿಯಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುತ್ತಿರುವ ಶಿಕ್ಷಕ , ಸಲೀಂ ಎಂ.ಡಾಂಗೆ

ರಬಕವಿ ಬನಹಟ್ಟಿ

ಹೊಸ ವರ್ಷದ ಆಚರಣೆ ಬಂತಂದ್ರೆ ಕುಡಿದು ಕುಪ್ಪಳಿಸವುದು ಎಲ್ಲೆಡೆ ಕಾಣಸಿಗುತ್ತದೆ ಇಲ್ಲೊಬ್ಬ ವಿಶಿಷ್ಟವಾದ ಕಲಾ ಶಿಕ್ಷಕರು ಒಬ್ಬರಿದ್ದಾರೆ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಲೀಂ ಎಂ ಡಾಂಗೆ ಇವರು ಕಲಾ ಕೃತಿಗಳನ್ನು ವಿಶಿಷ್ಟ ರೂಪದಲ್ಲಿ ರಚನೆ ಮಾಡುತ್ತಾರೆ . ಸೂಫಿ ಸಂತರು ಬುದ್ಧ , ಬಸವ ಪುರಂದರದಾಸರು ಇನ್ನು ಅನೇಕ ಮಹಾತ್ಮರು ಸಮಾಜಕ್ಕೆ ಶಾಂತಿ ಸಂದೇಶಗಳನ್ನು ಸಾರಿದ ವಚನಗಳ ಸಾರವನ್ನು ತಮ್ಮ ವಿಭಿನ್ನ ಚಿತ್ರಕಲೆಗಳ ಮೂಲಕ ಗ್ರೀಟಿಂಗ್ಸ್ ಗಳಲ್ಲಿ ಬಿಡಿಸಿ , ಅದಕ್ಕೊಂದು ಒಳ್ಳೆಯ ಹೆಸರುವನ್ನು ಕೊಟ್ಟು ಅದನ್ನು ವರ್ಣ ರಂಜಿತ ಚಿತ್ರದಲ್ಲಿ ಮುದ್ರಣ (ಪ್ರಿಂಟ್ ) ಹಾಕಿ ಇನ್ನೇನು ಹೊಸ ವರ್ಷ ಬರುವಷ್ಟರಲ್ಲಿಯೇ , ವಾರದ ಮುಂಚೆ ಕೋಮುಸೌಹಾರ್ದತೆಯನ್ನು ಎತ್ತಿ ಹಿಡಿಯಲಿಕ್ಕೆ ಎಲ್ಲಾ ಸಮಾಜಗಳಿಗೆ ಶಾಂತಿ ಸಂದೇಶಗಳನ್ನು ತಮ್ಮ ವಿಭಿನ್ನ ಚಿತ್ರಕಲಾಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ರವಾನೆಯನ್ನು ಮಾಡುವುದರ ಮೂಲಕ ಅವರು ಸತ್-ಸಂಪ್ರದಾಯವನ್ನು ಈ ವಿಶಿಷ್ಟ ಚಿತ್ರಕಲಾ ಶಿಕ್ಷಕರು ರೂಡಿಸಿಕೊಂಡು ಬಂದಿದ್ದಾರೆ.

ದಯವೇ ಧರ್ಮದ ಮೂಲವಯ್ಯ ನಿಮ್ಮ ಏಕತೆ,ನನ್ನ ಪೂಜೆ,ನನ್ನ ಉಳಿಸಿ ಜಗತ್ತು ರಕ್ಷಿಸಿ,ಜೈ ಭಾರತ ಜನನಿಯ ತನುಜಾತೆ,ರಾಷ್ಟ್ರೀಯ ಏಕತೆಯೇ ನನ್ನ ಸೌಂದರ್ಯ ಹಾಗೂ ನವಿಲು ನರ್ತನ ಇನ್ನೂ ಅನೇಕ 16 ಚಿತ್ರ ಕಲೆಗಳ ಮೂಲಕ ಗ್ರೀಟಿಂಗ್ಸ್ ಗಳನ್ನು ಹೊರ ತಂದಿದ್ದಾರೆ.

ಸಲೀಂ ಮೈನುದ್ದೀನ್ ಡಾಂಗೆ ಇವರು ಕಲಾ ಶಿಕ್ಷಕರು ಸದ್ಯ ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೋಲಾರ್ ಪಟ್ಟಣದ ಸಿಖ್ಯಾಬ ಸಂಸ್ಥೆಯ ಉರ್ದು ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ .

ಪ್ರತಿಯೊಂದು ಹೊಸ ವರ್ಷಕ್ಕೆ ಅವರ ವಿಶಿಷ್ಟವಾದ ಕೋಮು ಸೌಹಾರ್ದತೆ ಸಲುವಾಗಿ ಸಾಮ್ಯರಸ ಬದುಕಿನ ಸಂದೇಶಗಳನ್ನು ಸಾರುವ ಅಪರೂಪದ ತಮ್ಮ ವಿಶಿಷ್ಟ ಕಲಾ ಕೃತಿಗಳಲ್ಲಿ ಬಿಡಿಸಿ ಗಣ್ಯ ವ್ಯಕ್ತಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ತಮ್ಮ ಚಿತ್ರಕಲೆಗಳ ಗ್ರೀಟಿಂಗ್ಸ್ ಗಳನ್ನು ಹಂಚುವುದರ ಮೂಲಕ , ಹೊಸ ವರ್ಷದ ಆಚರಣೆಯನ್ನು ಮಾಡುವುದರ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.

ಶಿಕ್ಷಕ ಸಲೀಂ ಎಂ ಡಾಂಗೆ ಇವರು 1993 ದಿಂದ ಈವವರೆಗೆ 2023 ರವರೆಗೆ ಕನಿಷ್ಠ 15 ವರ್ಷದಿಂದ ಈ ವಿಭಿನ್ನ ಚಿತ್ರಕಲೆಗಳ ಮೂಲಕ ಗಣಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ 1995 – 96 ರಲ್ಲಿ ದೇಶದ ರಾಷ್ಟ್ರಪತಿಗಳಿಂದ ಕೂಡ ಪ್ರಶಂಸೆಯ ಪತ್ರವೂ ಕೂಡಾ ಬಂದಿದೆ .

ಪ್ರತಿಯೊಂದು ಹೊಸ ವರ್ಷದ ಸಂದರ್ಭದಲ್ಲಿ ಬೇರೆ ಬೇರೆ ಚಿತ್ರಕಲೆಗಳ ಮೂಲಕ ಶಾಂತಿ ಸಂದೇಶಗಳನ್ನು ಸಾರುತ್ತಿರುವ ಚಿತ್ರ ಕಲೆಗಳ ಮುಖಾಂತರ ಗ್ರೀಟಿಂಗ್ಸ್ ಗಳನ್ನು ಹೊರ ತರುತ್ತಾರೆ ಈ ವರ್ಷ ಮಾಡಿದ್ದ ಚಿತ್ರಕಲೆಯ ಶೈಲಿ ಮುಂದಿನ ಹೊಸ ವರ್ಷದಲ್ಲಿ ಬೇರೆ ತರಹದ ವಿಭಿನ್ನ ರೂಪದಲ್ಲಿ ಹೊರ ತರುತ್ತಾರೆ ಅಂದರೆ ಈ ವರ್ಷ ಮಾಡಿದ್ದ ಚಿತ್ರಕಲೆ ಬರುವ ಹೊಸ ವರ್ಷದಲ್ಲಿ ಚಿತ್ರಕಲೆ ಇನ್ನೊಂದು ತರ ಇರುತ್ತದೆ ತಮ್ಮ ಕಲಾ ಕೃತಿಗಳ ಗ್ರೀಟಿಂಗ್ಸ್ ಗಳನ್ನು ರಚಿಸಲು ತಮ್ಮ ಸ್ವಂತ ಬಂಡವಾಳ ಹಾಕುತ್ತಾರೆ ಯಾರಿಂದಲೂ ಕೂಡ ಒಂದು ರೂಪಾಯಿಯ ಸಹಾಯ ಕೂಡಾ ಪಡೆಯುವುದಿಲ್ಲ

1990ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯ ನಗರದ ಮುರಗೇಂದ್ರ ಲಲಿತ ಕಲಾ ಮಹಾವಿದ್ಯಾಲಯದಲ್ಲಿ, ಆರ್ಟ್ಸ್ ಮಾಸ್ಟರ್ ಪದವಿ ಮುಗಿಸಿದ ಸಲೀಂ ಡಾಂಗೆ ಅವರಿಗೆ ಚಿತ್ರಕಲೆ , ಸಾಹಿತ್ಯ , ರಂಗಭೂಮಿ , ಲಘು ಸಂಗೀತ , ಸಂಘಟನೆ ಹಾಗೂ ನಿರ್ದೇಶನದಲ್ಲಿ ಹೆಚ್ಚಿನ ಒಲವು ಇರುತ್ತದೆ .

ನಾನು ಕಷ್ಟಪಟ್ಟು ಮಾಡುತ್ತಿರುವ ಕಲಾಕೃತಿ ಗ್ರೀಟಿಂಗ್ಸ್ ಗಳ ಸಾಮ್ಯರಸ ಶಾಂತಿ ಸಂದೇಶ ಸಾರವನ್ನು ಜನಸಾಮಾನ್ಯರು ಅರಿತುಕೊಂಡು ,ಅದರಂತೆಯೇ ನಡೆದುಕೊಂಡರೆ ಪ್ರತಿಯೊಂದು ಸಮಾಜಕ್ಕಾಗಿ ನನ್ನ ಚಿತ್ರಕಲೆಗಳ ಮೂಲಕ ತನ್ನ ಅಳಿಲು ಸೇವೆ ಸ್ವಾರ್ಥಕವಾಗುತ್ತದೆ ಎಂದು ಕಲಾ ಶಿಕ್ಷಕ ಸಲೀಂ ಡಾಂಗೆ ಹೇಳುತ್ತಾರೆ .

ಲೇಖನ :
ಮಹೆಬೂಬ್ ಎಂ ಬಾರಿಗಡ್ಡಿ
ರಬಕವಿ ಬನಹಟ್ಟಿ
ಬಾಗಲಕೋಟೆ ಜಿಲ್ಲೆ
ರಬಕವಿ ಬನಹಟ್ಟಿ ತಾಲೂಕು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ