ಸಿಂಧನೂರಿನ ಅಮರ ಶ್ರೀ ಆಲದ ಮರದ ಹತ್ತಿರ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನಾಗೇಶ ಕಣ್ಣೇರ (ಸೈನಿಕರು) ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಾಯಿತು. ದ್ವಜಾರೋಹಣ ಮಾಡಲು ಆಗಮಿಸಿದ ನಾಗೇಶ ಕಣ್ಣೇರ್ ಸೈನಿಕರಿಗೆ ವನಸಿರಿ ತಂಡದವತಿಯಿಂದ ಹಾಗೂ ಶಾಲಾ ಮಕ್ಕಳಿಂದ ಸಸಿಯನ್ನು ಉಡುಗೊರೆಯಾಗಿ ನೀಡಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪೂರ,ಸದಸ್ಯರಾದ ರಂಜಾನ್ ಸಾಬ್, ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಶಾಲೆಯ ವಿದ್ಯಾರ್ಥಿಗಳ ಭಾಗಿಯಾಗಿದ್ದರು.
