ಯಾದಗಿರಿ/ಸೈದಾಪೂರ : ಸಮೀಪದ ಗಡಿನಾಡಿಗೆ ಹೊಂದಿರುವ ಕೃಷ್ಣಾ ಗ್ರಾಮದ ಜನರು ದಿನಾಂಕ 25/01/2023 ರಂದು ಬೆಂಗಳೂರನಲ್ಲಿ ಕರ್ನಾಟಕ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರ ಆಯೋಜನೆ ಮಾಡಿದ ಗಡಿ ಸಮಸ್ಯೆಗಳನ್ನು ಕುರಿತು ನಡೆದ ಸಭೆಯಲ್ಲಿ ಸಮಾಲೋಚನೆ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರ ಘನ ನೇತೃತ್ವದಲ್ಲಿ ನಡೆಯಿತು. ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಉಪಸ್ಥಿತರಿದ್ದರು. ಗಡಿ ಭಾಗದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕಾಸರಗೋಡು ಹಾಗೂ ಗೋವಾ ಭಾಗದ ಕನ್ನಡ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು. ಹೊರನಾಡು ಕನ್ನಡಿಗರಿಗೆ ಅನುಕೂಲ ಮಾಡಿಕೊಡುವ ಮೂಲಕ ಪರಿಹಾರ ಮಾಡಬೇಕು ಎಂದು ರಾಯಚೂರು ಗಡಿಭಾಗದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಿ ಬುಧವಾರ ಬೆಂಗಳೂರು ನಲ್ಲಿ ಕೃಷ್ಣಾ ಗಡಿನಾಡು ಸಂಘದ ಉಪಾಧ್ಯಕ್ಷ ಅಮರ್ ದೀಕ್ಷಿತ್ ಅವರು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಹೈದರಾಬಾದ್, ನಾರಾಯಣಪೇಟ್ , ಕರ್ನೂಲ್ ಹಾಗೂ ಅನಂತಪೂರ್ ಹೊರ ರಾಷ್ಟ್ರದ ಜಿಲ್ಲೆಗಳಲ್ಲಿ ಇಂದಿಗೂ ಸುಮಾರು 25,000 ಮಕ್ಕಳು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಮುಂದಿನ ವಿದ್ಯಾಭ್ಯಾಸಕ್ಕೆ ಆ ಮಕ್ಕಳು ಕರ್ನಾಟಕಕ್ಕೆ ಹೋದಾಗ ಆ ಮಕ್ಕಳಿಗಾಗುವ ಮುಂದಿನ ವಿದ್ಯಾಭ್ಯಾಸಕ್ಕೆ ದಾಖಲಾತಿ, ಹಾಸ್ಟೆಲ್ ತೊಂದರೆ ಹಾಗೂ ಇನ್ನೂ ಅನೇಕ ತೊಂದರೆಗಳ ನಿವಾರಣೋಪಾಯ ಮಾಡಬೇಕು.
ನಮ್ಮ ಈ ಪ್ರಾಂತ್ಯವನ್ನು ಗಡಿ ನಾಡು ಕನ್ನಡಿಗರು ಎಂದು ಘೋಷಿಸಬೇಕು. ಗಡಿನಾಡಿಗೆ ಸಿಗುವ ಸರ್ಕಾರದ ಸೌಲಭ್ಯಗಳು ನಮ್ಮ ಗಡಿನಾಡು ಕನ್ನಡ ಮಕ್ಕಳಿಗೂ ಸಿಗಬೇಕು.
ಇನ್ನು ಮುಂದೆ ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಾವ ತೊಂದರೆ ಆಗದಂತೆ ಬೇಡಿಕೆಗಳನ್ನು ಈಡೇರಿಸಬೇಕು.
ಕೃಷ್ಣದಲ್ಲಿ ನಾವು ಉಚಿತ ಸ್ಥಳ ಕೊಡುತ್ತೇವೆ, ಆ ಜಾಗದಲ್ಲಿ ಒಂದು ಕನ್ನಡ ಭವನ ನಿರ್ಮಾಣ ಮಾಡಬೇಕು ಎಂದು ಗಡಿನಾಡು ಸಂಘದ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಅವರು ಮಾತನಾಡಿ ಮುಖ್ಯಮಂತ್ರಿಗಳ ದೃಷ್ಟಿಗೆ ಈ ಸಮಸ್ಯೆಗಳು ತಂದು ಆದಷ್ಟು ತೀವ್ರ ಈ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳೋಣ ಎಂದು ಭರವಸೆ ನೀಡಿದರು.
ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಹೈದರಾಬಾದ್ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ದೂರಿಯವರು ಕರ್ನಾಟಕ ಗಡಿ ಪ್ರದೇಶದ ಅಭಿವೃದ್ಧಿ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮುಂಬರುವ ದಿನಗಳಲ್ಲಿ ಕನ್ನಡ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಮಾಡಿ ಹತ್ತು ಜನ ಉತ್ತಮ ಶಿಕ್ಷಕರಿಗೆ ಗೌರವ ಸನ್ಮಾನ ಮಾಡುವ ಸಮಾರಂಭ ಆಯೋಜನೆ ಮಾಡಲು ಇಲಾಖೆಯಿಂದ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದರು. ಈ ನಿಮಿತ್ತವಾಗಿ ಅಧ್ಯಕ್ಷರಿಗೆ ಎಲ್ಲಾ ಕನ್ನಡ ಶಿಕ್ಷಕರ ಪರವಾಗಿ ಅಭಿನಂದನೆಗಳು ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬೆಳಗಾವಿ ಕನ್ನಡ ಹೋರಾಟಗಾರ ಅಶೋಕ ಚಂದ್ರಗಿ, ಡಾ. ತಮಿಳ ಸೆಲ್ವಿ, ಶ್ರೀನಿವಾಸ ತೆಲಂಗ ಮೆಟ್ಟಿ, ಜಮಶೆಟ್ಟಿ, ಅಮರ್ ದೀಕ್ಷಿತ್ ಹಾಗೂ ಇತರರು ಭಾಗವಹಿಸಿದ್ದರು.



















