ಯಾದಗಿರಿ: ಇಂದು ನಡೆದ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಆಶೀರ್ವಾದ ಟ್ರಸ್ಟ್ ಹುಣಸಗಿ ಇವರ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ ಶ್ರೀ ಪರಮ ಪೂಜ್ಯರಾದ ಮರಳು ಮಹಾಂತ ಶಿವಯೋಗಿ ಶಿವಾಚಾರ್ಯರು ಹಾಗೂ ಪರಮಪೂಜ್ಯ ಶ್ರೀ ಸೋಮೇಶ್ವರ ಶಿವಾಚಾರ್ಯರು ನಾಗಠಾಣ ದಿವ್ಯ ಸಾನಿಧ್ಯ ವಹಿಸಿದ್ದರು. ಈ ಆರೋಗ್ಯ ಶಿಬಿರ ಆಯೋಜನೆ ಮಾಡಿದ ಆಶೀರ್ವಾದ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ಗೌಡ ಹೊಸಮನಿ ಅವರು ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ ನಡೆಸುತ್ತಾ ಜೊತೆಗೆ ಉತ್ತಮವಾದ ಸಮಾಜ ಸೇವೆ ಮಾಡುತ್ತಾ ಹಾಗೇ ಗ್ರಾಮದ ಜನರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವ ಹೃದಯವಂತರು ಎಂದು ಗ್ರಾಮಸ್ಥರು ಹೇಳುತ್ತಾರೆ.ಡಾ|| ವೀರಭದ್ರಪ್ಪ ಗೌಡ ಹೊಸಮನಿ ಅವರು ಉಚಿತ ಆರೋಗ್ಯ ಶಿಬಿರ ಮಾಡುವುದರಿಂದ ನನಗೆ ಹೆಮ್ಮೆ ಅನಿಸುತ್ತದೆ. ಜನರ ಸೇವೆಯೇ ನನ್ನ ಸೇವೆ ಎಂದು ನಾನು ಜೀವನ ಮಾಡುತ್ತಿದ್ದೇನೆ. ವೈದ್ಯೋ ನಾರಾಯಣ ಹರಿ ಎನ್ನುವ ಹಾಗೆ ಕಣ್ಣಿನ ಚಿಕಿತ್ಸೆ , ಹೃದಯ ಚಿಕಿತ್ಸೆ , ಮೊಳಕಾಲು ಹೀಗೆ ಹಲವಾರು ಕಾಯಿಲೆಗಳ ಚಿಕಿತ್ಸೆ ನೀಡುವುದರ ಜೊತೆಗೆ ದಿನ ದಲಿತರ ಮತ್ತು ಬಡವರ ಜನರಿಗೆ ಸೇವೆ ಮಾಡುವುದೇ ನನ್ನ ಅಳಿಲು ಸೇವೆ ಎಂದು ಭಾವಿಸುತ್ತೇನೆ. ಎಂದು ಡಾ|| ವೀರಭದ್ರಪ್ಪ ಗೌಡ ಹೊಸಮನಿ ಅವರು ಹೇಳಿದರು.
ಆಶೀರ್ವಾದ ಟ್ರಸ್ಟ್ ಹುಣಸಗಿ ಇವರ ಆಶ್ರಯದಲ್ಲಿ ನಡೆದ ಬೆಂಗಳೂರು ಖ್ಯಾತ ವೈದ್ಯರಾದ ಡಾ|| ಮಲ್ಲನಗೌಡ , ಯಲ್ಲಾನಾಯಕ್ ವನದುರ್ಗ, ಮಲ್ಲನಗೌಡ ಉಕ್ಕಿನಾಳ , ಸಗರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಹಿರಿಯ ನಾಗರಿಕರ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ