ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಪ್ರಥಮ ಪುರಾಣ,ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹಗಳು

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಶ್ರೀರೇಣುಕಾ ಯಲ್ಲಮ್ಮ ದೇವಿಯ ಪ್ರಥಮ ಪುರಾಣ ಮತ್ತು ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಪುರಾಣ ಪ್ರವಚನಕಾರರಾದ ಶ್ರೀ. ವೇ. ಮೂ. ರುದ್ರಯ್ಯ ಶಾಸ್ತ್ರಿಗಳು ಮದ್ಲಾಪುರ್, ಪುರಾಣ ಪಠಣಕಾರರು ಶ್ರೀ ರವಿ ಕಾಶೆಟ್ಟಿ ಗಂಗಾವತಿ, ತಬಲ ವಾದಕರು ಶ್ರೀ ಚನ್ನಬಸಯ್ಯ ಶಾಡಗುಪ್ಪಿ ಹಾನಗಲ ಇವರ ಸಮಕ್ಷದಲ್ಲಿ ಜಾಲಿಹಾಳ ಗ್ರಾಮದ ಪ್ರಥಮ ಪುರಾಣ ಪ್ರವಚನವು ಪ್ರತಿ ದಿನ ಸಾಯಂಕಾಲ 7-30 ರಿಂದ 9-30 ನಿಮಿಷದವರಿಗೆ ಶಾಸ್ತ್ರಿಗಳ ಅಮೋಘ ಪ್ರವಚನದಿಂದಲೂ ಕಲಾವಿದರ ಸುಶ್ರಾವ್ಯ ಸಂಗೀತದಿಂದಲೂ ಜರಗುತ್ತದೆ.ಸಾಮೂಹಿಕ ವಿವಾಹಗಳು ಈ ಜಾತ್ರೆಯಲ್ಲಿ ನಡೆಯಲಿದ್ದು ಯಾರಾದರೂ ಸಾಮೂಹಿಕ ವಿವಾಹಗಳ ನೋಂದಣಿಯನ್ನು ಮಾಡಿಸಲು ಇಚ್ಛೆ ಉಳ್ಳವರು ಇದೇ ದಿನಾಂಕ 01-02-2023 ಒಳಗಡೆ ನೋಂದಾಣಿಯನ್ನು ಮಾಡಿಸಬೇಕು.ಇದೇ ರವಿವಾರ ದಿನಾಂಕ 05-02-2023 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀದೇವಿಯ ಮೂರ್ತಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾ ಆಚರಣೆ ಸುಮಂಗಲಿಯರಿಂದ ಕಳಸ, ಕನ್ನಡಿ, ಕುಂಬ, ಡೊಳ್ಳು ,ಭಜನೆ, ಮೇಳದ ಮೆರವಣಿಗೆಯೊಂದಿಗೆ ಬೆಳಗ್ಗೆ 6:30 ರಿಂದ 7:30ರ ವರೆಗೆ ಗಂಗೆಸ್ಥಳಕ್ಕೆ ಹೋಗಿ ಬರುವುದು ತದನಂತರ ಬೆಳಗ್ಗೆ 10.30 ಕ್ಕೆ ಪ್ರಸಾದ ವ್ಯವಸ್ಥೆ ಇರುತ್ತದೆ ಹಾಗೂ ಸರಿಯಾಗಿ ಮಧ್ಯಾಹ್ನ 12:30 ನಿಮಿಷಕ್ಕೆ ಸಲುವ ಅಭಿಜಿತ್ ಲಗ್ನದ ವಿವಾಹ ಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತವೆ. ನಂತರ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಪುರಾಣ ಮಹಾಮಂಗಳ ನಡೆಯುವುದು ತದನಂತರ ರಥೋತ್ಸವ ಸಂಜೆ 4:30 ರಿಂದ 7.30 ರವರೆಗೆ ಜರಗುವುವು ಆದಕಾರಣ ಸಕಲ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ತನು ಮನ- ದನ ಸೇವೆಗೈದು ಶ್ರೀದೇವಿಯ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಕೋರುವ ಜಾಲಿಹಾಳ ಗ್ರಾಮ, ಜಂಬುನಾಥನ ಹಳ್ಳಿ, ಹನುಮಾಪುರ, ಕೆ. ಬಸಾಪುರ, ಕೆ.ಹಂಚಿನಾಳ ಗ್ರಾಮದ ಸಕಲ ಸದ್ಭಕ್ತರು ಹಾಗೂ ಎಲ್ಲಾ ಯುವಕರ ಸಂಘಗಳು ಆಹ್ವಾನಿಸುವರು.
ವರದಿ – ವೆಂಕಟೇಶ.ಹೆಚ್.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ