ಯಾದಗಿರಿ: ಇಂದು ಗಂಗಾ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಚೇತರಿಕೆಯ ಮುಂದುವರಿದ ಭಾಗ ಕಲಿಕೆ ಹಬ್ಬದ ಕಾರ್ಯಕ್ರಮಕ್ಕೆ ಮಾನ್ಯ ಉಪ ನಿರ್ದೇಶಕರಾದ ಶಾಂತಗೌಡ ಪಾಟೀಲ್ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಅಧಿಕಾರಿಗಳು ಯಾದಗಿರಿ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗಾ ನಗರ ಶಹಾಪುರ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಲ್ಕು ಕಾರ್ನರ್ ಗಳಲ್ಲಿ ನಡೆಯುತ್ತಿರುವ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಅಧಿಕಾರಿಗಳು ಈ ಚಟುವಟಿಕೆಗಳಲ್ಲಿ ಪಾಲ್ಗೊಂಡು ಖುಷಿ ಪಟ್ಟರು ಊರು ಸುತ್ತೋಣ ಕಾರ್ನರ್ ನಲ್ಲಿ ಸಂದರ್ಶನ ಚಟುವಟಿಕೆಯಲ್ಲಿ ಭಾಗವಹಿಸಿ. ಮಕ್ಕಳ ಕ್ರಿಯಾತ್ಮಕ ಸಜನಾತ್ಮಕ ಕೌಶಲ್ಯವನ್ನು ಕುರಿತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಕಲಿಕಾ ಹಬ್ಬ ಮತ್ತು ಕಲಿಕಾ ಕೊರತೆಯನ್ನು ಪೂರೈಸುವುದರ ಜೊತೆಗೆ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮಾಡುವುದಾಗಿದೆ. ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಲಿಕಾ ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಸ್ಥರಾದ ಹನುಮಂತರಾಯ ಸೋಂಪುರ್ ಮುಖ್ಯ ಗುರುಗಳಾದ ಶ್ರೀಮತಿ ಶಾಂತಾಬಾಯಿ ಹಾಗೂ ನೋಡಲ್ ಅಧಿಕಾರಿಗಳಾದ ರಾಜಶೇಖರ್ ಪತ್ತಾರ್ , ಲಕ್ಷ್ಮಣ ದಕ್ಷಿಣ ಹಾಗೂ ಉತ್ತರ ವಲಯದ ಸಿ.ಆರ್.ಪಿ ವೀರಭದ್ರಯ್ಯ, ಪ್ರಕಾಶ್ ಶಾಲೆಯ ಶಿಕ್ಷಕರು ಮತ್ತು ಶಿಕ್ಷಕಿಯರು ಹಾಗೂ ಮಕ್ಕಳು ಗಂಗಾ ನಗರದ ನಿವಾಸಿಗಳು ಕಲಿಕಾ ಹಬ್ಬದ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ ಶಹಾಪುರ