ಹನೂರು :ಪ್ರಪಂಚವೇ ಕೋವಿಡ್ 19 ಸಂದರ್ಭದಲ್ಲಿ ಸಾಂಕ್ರಮಿಕ ರೋಗದಲ್ಲಿ ತತ್ತರಿಸಿದಾಗ ಅದರ
ನಿಯಂತ್ರಣಕ್ಕಾಗಿ ಮತ್ತು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಶ್ರೀಮಹದೇಶ್ವರ ದೇವರಲ್ಲಿ ಹರಕೆಯನ್ನು ಕಟ್ಟಿಕೊಂಡಿದ್ದೆ ಅದರ ಹರಕೆ ತೀರಿಸುವ ಸಲುವಾಗಿ ಮಳವಳ್ಳಿ ಕ್ಷೇತ್ರದ ಜನತೆಯ ಜೊತೆಯಲ್ಲಿ ಪಾದಯಾತ್ರೆ ಹೊರಟ್ಟಿದ್ದೇವೆ ಎಂದು
ಮಳವಳ್ಳಿ ಕ್ಷೇತ್ರದ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು ಹನೂರು ಪಟ್ಟಣದ ಜೆ ಡಿ ಎಸ್ ಕಚೇರಿಯ ಹತ್ತಿರ ಆತ್ಮೀಯವಾಗಿ ಬರಮಾಡಿಕೊಂಡ ರಾಜ್ಯ ಉಪಾಧ್ಯಕ್ಷರಾದ ಎಮ್ ಆರ್ ಮಂಜುನಾಥ್ ರ ಸಹಯೋಗದಲ್ಲಿ ಪತ್ರಿಕೆಯವರೊಡನೆ ಮಾತನಾಡಿದ ಅವರು
ಹರಕೆ ತೀರಿಸಲೆಂದು ಮಳವಳ್ಳಿಯಿಂದ ಮಲೆ ಮಹದೇಶ್ವರ
ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮೂಲಕ ಮಾದಪ್ಪನ ಸನ್ನಿಧಿಗೆ ಸುಮಾರು 103
ಕಿ.ಮೀ ದೂರವಿದ್ದು ಈಗಾಗಲೇ ಅರ್ಧಭಾಗ ಚಲಿಸಿದ್ದು,
ಪಾದಯಾತ್ರೆಯು ಇನ್ನೂ ಮುಂದುವರಿಯುತ್ತದೆ ಅದೆ ರೀತಿಯಲ್ಲಿ ಮಂದಿನ ದಿನಗಳಲ್ಲಿ ಹನೂರು ಕ್ಷೇತ್ರದ ಜನತೆಗೆ ಕಷ್ಟಕಾಲದಲ್ಲೂ ಸಹ ಜೊತೆಯಲ್ಲಿದ್ದ ಮಂಜುನಾಥ್ ರವರು ಮುಂದಿನ ಭಾರಿಗೆ ಶಾಸಕರಾಗಲಿ ಹಾಗೂ ಕುಮಾರಣ್ಣ ಮುಖ್ಯಮಂತ್ರಿಯಾದರೆ ಮತ್ತೆ ಮುಂದಿನ ಬಾರಿಗೂ ಸಹ ಮಾದಪ್ಪನ ಸನ್ನಿಧಿಗೆ ಆಗಮಿಸಿ ಹರಕೆ ತೀರಿಸಲಾಗುತ್ತದೆ ನನ್ನ ಕ್ಷೇತ್ರ ಮತ್ತು ಮಂಜಣ್ಣನವರ ಕ್ಷೇತ್ರವು ಹೊಂದಿಕೊಂಡಿರುವುದರಿಂದ ಎರಡು ಕಡೆಯು ನಮ್ಮ ಪಕ್ಷದ ನಾವುಗಳೆ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಹರಕೆ ತೀರಿಸಲು ಮಳವಳ್ಳಿಯಿಂದ ಹನೂರು ಮಾರ್ಗವಾಗಿ ಮಲೆ
ಮಾದೇಶ್ವರ ಬೆಟ್ಟಕ್ಕೆ ಪಾದಯತ್ರೆ ಮಾಡುತ್ತಿರುವ ಶಾಸಕರಾದ ಅನ್ನದಾನಿಯವರು ಪಕ್ಷವನ್ನು ತಾಯಿ ಸಮಾನವಾಗಿ ನೋಡುತ್ತಾರೆ ಅಲ್ಲದೆ ಅವರ ದೇವರ ಭಕ್ತಿಗೆ ನನ್ನ ನಮನ ಎಂದು ಅವರ ಕನಸು ನನಸಾಗಲಿ ಎಂದು ಹನೂರು ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿಯಾದ ಎಮ್ ಆರ್ ಮಂಜುನಾಥ್ ತಿಳಿಸಿದರು.
ತಲುಪಿದ ನಂತರ ವಿಶೇಷ ಪೂಜೆ ಸಲ್ಲಿಸಲಾಗುವುದು ಇದೇ ವೇಳೆ ಪಾದಯಾತ್ರೆಯಲ್ಲಿ ಜೆಡಿಎಸ್ ಪಕ್ಷದ
ಕಾರ್ಯಕರ್ತರು,ಹನೂರು ಜೆ ಡಿ ಎಸ್ ಮುಖಂಡರುಗಳಾದ ಮಂಜೇಶ್ ಗೌಡ,ಪ. ಪಂಚಾಯತಿ ಸದಸ್ಯರಾದ ಮಹೇಶ್ ,ಸೇರಿದಂಂತೆ ಮಳವಳ್ಳಿ ಕ್ಷೇತ್ರದ ಜನತೆ ಸಹ ಅವರ ಜೊತೆ ಹೆಜ್ಜೆ
ಹಾಕಿದರು.
ವರದಿ :ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.