ವಿಜಯಪುರ:ಸರ್ಕಾರದ ವಿನೂತನ ಕಾರ್ಯಕ್ರಮವಾದ ಕಲಿಕಾ ಹಬ್ಬವು ಸರಕಾರಿ ಶಾಲೆಗಳ ಮಕ್ಕಳಿಗೆ ಸಂತಸ ತಂದಿದೆ ಎಂದು ನಗರದ ಕೆ.ಬಿ.ಎಸ್ ನಂಬರ್ 26 ಜಲನಗರ ಕ್ಲಸ್ಟರ್ ಮಟ್ಟದ ಎರಡು ದಿನಗಳ ಕಲಿಕಾ ಹಬ್ಬ ಉದ್ಘಾಟಿಸಿ ಪಾಲಿಕೆಯ ನೂತನ ಸದಸ್ಯರಾದ ಪ್ರೇಮಾನಂದ ಬಿರಾದಾರ ಮಾತನಾಡಿದರು.
ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳು ಇಳಕಲ್ ಸೀರೆ ಉಟ್ಟು ಕುಂಭ,ಕೋಲಾಟ,ಲೇಜಿಮ್ ಹಾಗೂ ವೇಷ ಭೂಷಣ ತೊಟ್ಟ ಕಲಿಕಾ ಹಬ್ಬದ ಮೆರವಣಿಗೆಗೆ ಸಿ ಆರ್ ಪಿ ಶ್ರೀ ಸಿದ್ದನಗೌಡ ಬಿರಾದಾರ ಚಾಲನೆ ನೀಡಿದರು.
ಮೆರವಣಿಗೆಯು ಜಲನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸರಕಾರಿ ಪ್ರೌಢಶಾಲೆ ಯಲ್ಲಿ ಕಾರ್ಯಕ್ರಮ ನಡೆಯಿತು. ಪರಶುರಾಮ ಕಾಂಬ್ಳೆಕರ , ಸಯ್ಯದ್ ನೀಡೋಣಿ, A R ದಶವಂತ,S R ಹಜೇರಿ, I R ಹೊಸಮನಿ, M M ಮುಂದೆವಾಲಿ S Z ಚೌಧರಿ, P A ದ್ಯಾವಾಪುರ , T C ನಾಟೀಕಾರ ಉಪಸ್ಥಿತರಿದ್ದರು. K R ಕೊಕಟನೂರ ನಿರೂಪಿಸಿ ಶ್ರೀಮತಿ ಕೆ.ಸುನಂದಾ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.