ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಗೋಗಿ ಗ್ರಾಮದಲ್ಲಿ ನಿನ್ನೆ ಬೂತ್ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಮುಖಂಡರಾದ ಶ್ರೀ ಅಮೀನರೆಡ್ಡಿ ಯಾಳಗಿ ಅವರ ನೇತೃತ್ವದಲ್ಲಿ ಪ್ರತಿ ಮನೆಗೆ ಪಕ್ಷದ ಸಾಧನೆಯ ಕರಪತ್ರ ನೀಡಿ ಪಕ್ಷದ ಸದಸ್ಯತ್ವ ಪಡೆಯುವಂತೆ ಮಾಹಿತಿ ನೀಡಲಾಯಿತು
ಈ ಸಂದರ್ಭದಲ್ಲಿ ಬಿ ಜೆ ಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಶ್ರೀ ರಾಜುಗೌಡ ಪಾಟೀಲ ಉಕ್ಕಿನಾಳ ಹಾಗೂ ಹಿರಿಯ ಮುಖಂಡರಾದ ಶ್ರೀ ಬಸವರಾಜಪ್ಪಗೌಡ ವಿಭೂತಿಹಳ್ಳಿ ಹಾಗೂ ಪಕ್ಷದ ಪ್ರಮುಖರು ಹಾಗೂ ಗ್ರಾಮದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
