ಯಾದಗಿರಿ: ಶಹಾಪುರ ತಾಲೂಕಿನ ಹೋತಪೇಠ ಗ್ರಾಮದಲ್ಲಿ ದಿನಾಂಕ ೩೦/೧/೨೦೨೩ ಮತ್ತು ೩೧/೧/೨೦೨೩ ರಂದು ಎರಡು ದಿನಗಳ ಕಾಲ ಕ್ಲಸ್ಟರ್ ಕಲಿಕಾ ಹಬ್ಬ
ವನ್ನು ಏರ್ಪಡಿಸಲಾಗಿದ್ದು. ಮೊದಲ ದಿನ ಕಲಿಕಾ ಹಬ್ಬವನ್ನು ಹೋತಪೇಠ ಗ್ರಾಮದ ಕನಕ ವೃತ್ತದಿಂದ ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ಸರಕಾರಿ ಪ್ರೌಢ ಶಾಲೆ ವರೆಗೂ ಅಲಂಕೃತ ಎತ್ತಿನ ಗಾಡಿ, ಡೊಳ್ಳು , ಲೇಜಿಮ್ ಕೋಲಾಟ, ವಿವಿಧ ವೇಷಗಳ ಛತ್ರಿ ಚಾಮರಗಳೊಂದಿಗೆ ಸಾಗಿ ಬಂದಿತು. ನಂತರ ಕಾರ್ಯಕ್ರಮ ಉದ್ಘಾಟನೆಯನ್ನು ಪರಮ ಪೂಜ್ಯರಾದ ಶ್ರೀ ಶ್ರೀ ಶಿವಲಿಂಗ ಶರಣರು ಕೈಲಾಸ ಆಶ್ರಯ ಹೋತಪೇಟ ಶ್ರೀ ಗಳು ನೇರವೇರಿಸಿದರು. ಅಧ್ಯಕ್ಷತೆಯನ್ನು ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಚನ್ನಬಸವರಾಜೇಶ್ವರಿ ವಹಿಸಿದ್ದರು. ಕಲಿಕಾ ಹಬ್ಬಕ್ಕೆ ಭೀಮರಾಯನ ಗುಡಿಯ ಕ್ಲಸ್ಟರಿನ ವಿವಿಧ ಶಾಲೆಗಳಿಂದ ೧೨೦ ಮಕ್ಕಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ಡಿಡಿಪಿಐ ರವರು ಭಾಗವಹಿಸಿ ಕಲಿಕಾ ಹಬ್ಬದ ಕುರಿತು ಮಾತನಾಡಿದರು. ಎಡರು ವರ್ಷ ಕರೋನಾ ಬಂದ ಮೇಲೆ ಮಕ್ಕಳ ಕಲಿಕಾ ಹಿಂದೆ ಬಿದ್ದ ಕಾರಣ ಈಗ ಸರಕಾರ ದಿಂದ ಮಕ್ಕಳಲ್ಲಿ ಉತ್ತೇಜನ ಉಲ್ಲಾಸ ಉತ್ಸಾಹ ಬರ್ಲಿ ಎಂದು ಕಲಿಕಾ ಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಅತಿಥಿಗಳಾಗಿ ಮಾನ್ಯ ಕ್ಷೇತ್ರ ಸಮನ್ಮಯಾಧಿಕಾರಿಗಳು ಶ್ರೀಮತಿ ರೇಣುಕಾ ಪಾಟೀಲ್, ಶಿಕ್ಷಣ ಸಂಯೋಜಕರು ಗೋಗಿ ವಲಯ ಈರಯ್ಯ ಹಿರೇಮಠ, ಕಲಿಕಾ ಹಬ್ಬದ ನೋಡಲ್ ಅಧಿಕಾರಿ ರಾಜಶೇಖರ ಪತ್ತಾರ್, ಗೋಗಿ ವಲಯ ಬಿ.ಆರ್.ಪಿ ಆನಂದಸ್ವಾಮಿ ನಾಯಕ, ಮತ್ತು ಅಜೀಂ ಪ್ರೇಮಜಿ ಫೌಂಡೆಶನ್ ಶಹಾಪುರ ಅಧಿಕಾರಿ, ಬಿ.ಆರ್. ಪಿ ಗೌಡಪ್ಪ ಗೌಡ ಹುಲ್ಕಲ್ , ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಣ್ಣ ಹುಲ್ಕಲ್, ಅಮೃತರೆಡ್ಡಿ ಪಾಟೀಲ, ಸುಧಾಕರರೆಡ್ಡಿ, ಮಾರುತಿ ನಾಟೇಕರ್, ಹೊನ್ನಯ್ಯ ಪೂಜಾರಿ, ಜೇಟಪ್ಪ ಏವೂರ, ಕಾಸಲಿಂಗ ಪಟ್ಟೇದಾರ, ಭೀಮರಾಯ ನಾಟೇಕರ್, ಮಾಳಪ್ಪ ಪೂಜಾರಿ, ಸುಭಾಷ, ಗೀತಾಂಜಲಿ, ಶರಣು ಧರ್ಮಣ್ಣ, ಅಮೋಘಪ್ಪ ಕಲ್ಲೂರು, ರಮೇಶ್ ಹೊಸಮನಿ, ಸಿದ್ದು ಪಟ್ಟೇದಾರ, ರಾಜಶೇಖರ ಪಾಟೀಲ, ರಾಯಣ್ಣ, ಇಬ್ರಾಹಿಂ, ಸಂಪನ್ಮೂಲ ವ್ಯಕ್ತಿಗಳು. ಶಾಲಾ ಶಿಕ್ಷಕರು ಶಿಕ್ಷಕರು ಶಿಕ್ಷಕಿಯರು ಮಕ್ಕಳು ಹೋತಪೇಟ ಗ್ರಾಮಸ್ಥರು ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿ ಶಿವಪುತ್ರಪ್ಪ ವಿಶ್ವಕರ್ಮ, ಸಿ.ಆರ್.ಪಿ ಮಶಾಕ್ ಇನಾಮದಾರ್ ಸ್ವಾಗತಿಸಿದರು, ಕಾವೇರಿ ಪಾಟೀಲ ನಿರೂಪಿಸಿ ವಂದಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ