ಹನೂರು:ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿಯ ಬೆಲಿಯ ತಂತಿಯು ತುಂಡಾದ ಪರಿಣಾಮ ತುಳಿದು ಆನೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ .
ಈ ಘಟನೆಯು ಹನೂರು ತಾಲ್ಲೂಕು ವ್ಯಾಪ್ತಿಯ ಗುಂಡಿಮಾಳ ಗ್ರಾಮದ ಬಳಿ ನಡೆದಿದೆ.
ಆನೆ ಮೃತಪಟ್ಟ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಸಂಭಂದಿಸಿದ ಹಾಗೆ
ಗ್ರಾಮದ ಪ್ರಭಾಕರ್ ಎಂಬುವವರ ಜಮೀನಿನಲ್ಲಿ ಆನೆ ಕಳೆಬರವನ್ನು ಸ್ಥಳೀಯರು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿಗಳು ತಂಡವು ಸ್ಥಳ ಪರಿಶೀಲನೆ ನಡೆಸಿ.
ಆನೆಯ ಅನಾರೋಗ್ಯಕ್ಕೆ ತುರ್ತಾಗಿ ಅಸುನೀಗಿದೆಯೋ ಅಥವಾ ಬೇರೆ ಯಾವ ಕಾರಣದಿಂದ ಮೃತಪಟ್ಟಿದೆ ಎಂಬ ಬಗ್ಗೆ ನಿಖರವಾಗಿ ಪರೀಕ್ಷೆ ನಡೆಸಿದ ನಡೆಸಿದ ನಂತರವೆ ಉತ್ತರ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಮುಂದಿನ ತನಿಖೆಗಾಗಿ ಸ್ವಯಂ ಪ್ರೇರಿತರಾಗಿ ದೂರು ದಾಖಲಾಗಿದೆ.
ವರದಿ:ಉಸ್ಮಾನ್ ಖಾನ್.
