ಹಾವೇರಿ: ಜಿಲ್ಲೆಯ ಶಿಗ್ಗಾಂವಿಯ ನೀರಲಕಟ್ಟಿ ತಾಂಡಾದಲ್ಲಿ ಕಾಡು ಔಡಲ ಬೀಜ ತಿಂದು 9 ಶಾಲಾ ಮಕ್ಕಳು ಅಸ್ವಸ್ಥರಾಗಿದ್ದು ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೀರಲಕಟ್ಟಿ ತಾಂಡಾ ಸರ್ಕಾರಿ ಶಾಲೆಯ ಬಳಿ ಸಿಕ್ಕ ಕಾಡು ಔಡಲ ಬೀಜವನ್ನು ತಿಂದ ಹಿನ್ನೆಲೆಯಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡು ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೀಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ
ಸಾರಾಂಶ: ಈ ದಿವಸ ದಿನಾಂಕ 30-01-2023 ರಂದು 16-15 ಗಂಟೆಯಿಂದ 16-30 ಘಂಟೆಯ ನಡುವಿನ ಅವಧಿಯಲ್ಲಿ ಶಿಗ್ಗಾವ್ ತಾಲೂಕು ನೀರಲಕಟ್ಟಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ
1) ಸಮರ್ಥ್ ರವಿ ಲಮಾಣಿ ವಯಾ 7
2) ಶರತ್ ಉಮೇಶ್ ಲಮಾಣಿ ವಯಾ 8
3) ಪೂಜಾ ಗಣಪತಿ ಲಮಾಣಿ ವಯಾ 8
4) ರೇಣುಕಾ ಸುಭಾಷ್ ಲಮಾಣಿ ವಯಾ 08
5) ಶಂಕ್ರಪ್ಪ ಹೇಮಂತ್ ಅಕ್ಕಸಾಲಿ ವಯಾ 08
6) ಪವನ್ ಗಂಗಪ್ಪ ಲಮಾಣಿ ವಯಾ 08
7) ದೇವಕ್ಕ ಕುಮಾರ್ ಲಮಾಣಿ ವಯಾ 08 ವರ್ಷ
8) ಪ್ರಿಯಾಂಕ ಸಕಾರಾಮ್ ಅಕ್ಕಸಾಲಿ ವಯಾ 8 ವರ್ಷ 9) ನವೀನ್ ದೇವಪ್ಪ ಲಮಾಣಿ ವಯಾ 8 ವರ್ಷ ಎಲ್ಲರೂ ನೀರಲಕಟ್ಟಿ ತಾಂಡ ಇವರು ಶಾಲೆಯ ಆವರಣದಲ್ಲಿ ಕಾಡ ಔಡಲ ಬೀಜವನ್ನು ಸೇವಿಸಿ ವಾಂತಿ ಹಾಗೂ ಜ್ವರದಿಂದ ಅಸ್ಪೆಸ್ಥರಾಗಿದ್ದರಿಂದ ಪಾಲಕರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲ ಮಾಡಿದ್ದಾರೆ. ಚಿಕಿತ್ಸೆ ಮುಂದುವರೆದಿರುತ್ತದೆ. ಡಾ: ಹನುಮಂತಪ್ಪಾ ವೈದ್ಯರನ್ನು ವಿಚಾರಿಸಲಾಗಿ ಯಾವ ಮಕ್ಕಳಿಗೂ ಜೀವ ಅಪಾಯವಿರುವುದಿಲ್ಲ ಅಂತ ತಿಳಿಸಿರುತ್ತಾರೆ.
-ಮಂಜುನಾಥ ಪಾಟೀಲ,ಹಾವೇರಿ