ಪಾವಗಡ: ತಾಲ್ಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಮರಿದಾಸನಹಳ್ಳಿ ಕ್ಲಸ್ಟರ್ ನ ಕಲಿಕಾ ಹಬ್ಬವನ್ನು ಸೋಮವಾರದಂದು ಮರಿದಾಸನಹಳ್ಳಿ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು .
ಇದೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಂಜನೇಯಲು ಕೆ ಅವರು ಕಲಿಕಾ ಹಬ್ಬದಲ್ಲಿ ಬರುವ ಪ್ರಮುಖ ನಾಲ್ಕು ಮೂಲಗಳು ಮಾಡು ಆಡು, ಕಾಗದ ಕತ್ತರಿ ಬಣ್ಣ
,ಊರು ತಿಳಿಯೋಣ ಹಾಗೂ ಹಾಡು ಆಡು ಇದರ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳಿಸಿದ್ದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಜರುಗಿತು
ಇದೇ ಸಂದರ್ಭದಲ್ಲಿ ಶಾಲೆಯ SDMC ಅಧ್ಯಕ್ಷರಾದ ಆಂಜನೇಯಲು , SDMC ಸದಸ್ಯ ಪರಮೇಶ್ , ಮರಿದಾಸನಹಳ್ಳಿ ಕ್ಲಸ್ಟರ್ CRP ನಾಗೇಂದ್ರ ನಾಯ್ಕ , ಉತ್ತಮ ಶಿಕ್ಷಣ ಪುರಸ್ಕೃತರು ಹಾಗೂ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ರಾಜಗೋಪಾಲ್, ಕ್ಲಸ್ಟರ್ ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.