ಯಾದಗಿರಿ: ಶಹಾಪುರ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ಪ್ರತಿಭಟನೆ ಮಾಡಲಾಯಿತು. ಯಾದಗಿರಿ ಮತಕ್ಷೇತ್ರದಲ್ಲಿ ಶಹಾಪುರ ತಾಲೂಕ ವ್ಯಾಪ್ತಿಗ ಬರುವ ಮದ್ದಕಲ್ ಗ್ರಾಮದಿಂದ ಬಿದನೂರು ಗ್ರಾಮದವರಗೆ ೨೦೨೧/೨೨ ನೇ ಸಾಲಿನ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ೩ ಕೋಟಿ ವೆಚ್ಚದ ೩ ಕಿ.ಲೊ ಮಿಟರ್ ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಕಾಮಗಾರಿ ಆಗಿದೆ ಎಂದು ಹೇಳಿದರು.
ವಡಗೇರಾ ತಾಲೂಕ ಶಹಾಪುರ ತಾಲೂಕ ಗುಂಡಳ್ಳಿ ಕೆರೆಯಿಂದ
ಚಟ್ನಳಿ ಗ್ರಾಮದವರಗೆ. ಗುಂಡಹಳ್ಳಿ ತಾಂಡದಿಂದ ಇಬ್ರಾಹಿಂಪುರ ಗ್ರಾಮದ ವರೆಗೆ ಹಾಗೂ ದೋರನಹಳ್ಳಿ ಗ್ರಾಮದಿಂದ ಟೋಕಾಪುರ ಗ್ರಾಮದವರಗೆ. ಹೈಯಾಳ (ಬಿ) ಯಿಂದ ಹಂಚಿನಾಳ ಗ್ರಾಮದ ವರೆಗಿನ ರಸ್ತೆ ೨೦೨೧/೨೨ ನೇ ಸಾಲಿನ ಪ್ಯಾಚ್ ವರ್ಕ್ ಕಾಮಗಾರಿ ತುಂಬಾನೇ ಕಳೆಪ ಮುಟ್ಟಿದಾಗಿದೆ.
ದೋರನಹಳ್ಳಿ ಯಿಂದ ಟೋಕಾಪುರ ಗ್ರಾಮದವರಗೆ ಪ್ಯಾಚ್ ವರ್ಕ್ ಕೆಲಸ ಮಾಡಿದೆ ಗುತ್ತಿಗೆದಾರ ಮತ್ತು ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಕೂಡಲೇ ಇಂತಹ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರ ಮೇಲೆ ತನಿಖೆ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
ಗುತ್ತಿಗೆದಾರನ ಲೈಸೆನ್ಸ್ ರದ್ದು ಮಾಡಿ ಅವರ ಹೆಸರು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶಿವಪುತ್ರ ಜವಳಿ ಶಿವಲಿಂಗ್ ಹಸನಪುರ್ ಚೆಂದಪ್ಪ ಮುನಿಯಪ್ಪನೋರ್ ಮಲ್ಲಿಕಾರ್ಜುನ ಹೊಸಮನಿ ವೀರಭದ್ರಪ್ಪ ತಳವಾರಗೇರಾ ಶಹಾಪುರ ತಾಲೂಕಾ ಸಂಚಾಲಕರಾದ ಮರೆಪ್ಪ ಕ್ರಾಂತಿ ಸಂತೋಷ ಗುಂಡಹಳ್ಳಿ ಶರಬಣ್ಣ ದೊರನಹಳ್ಳಿ ಕೋಗಿಲಕರ್ ಎಂ ಪಟೇಲ್ ಖಾಜಾ ಅಜ್ಮಿರ್ ಮಲ್ಲಪ್ಪ ತಳಬಿಡಿ ರವಿ ರಾಜು ದೊರನಹಳ್ಳಿ ಮತ್ತು ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ