ಜನ ಏನಂತಾರೆ?
ಎಲುಬಿಲ್ಲದ ನಾಲಿಗೆಯ ಮಾತಿಗೆ ಮಿತಿ ಇಲ್ಲ,
ಸೂಕ್ಷ್ಮತೆಗಳ ಅರ್ಥವೇನೆಂದು ಅದಕ್ಕೆ ತಿಳಿದಿಲ್ಲ.
ಮಾತನಾಡುವುದು ಮನಸ್ಸಿನ ಇಚ್ಚೆಯಂತೆ,
ಮನುಜ ಮನಸ್ಥಿತಿಗಳ ಪರಿವೇ ಇಲ್ಲದಂತೆ.
ಅನಿಸಿದ್ದನ್ನು ಮಾಡಲು ಹೊರಟರೆ
ಕುಗ್ಗಿಸುವ ಮಂತ್ರವನ್ನು ಜಪಿಸುವರು
ಅನಿಸಿಕೆಗಳನ್ನು ಹೇಳಬೇಕೆಂದರೆ
ನಮ್ಮ ಜ್ಞಾನಕ್ಕೆ ಪರೀಕ್ಷೆ ಒಡ್ಡುವರು.
ಯಾರು ಏನ್ ಎಂದರೇನು
ನಮ್ಮ ಬದುಕಿದು ನಮ್ಮದು
ಯಾರ ಮಾತಿಗೂ ಕಿವಿಗೊಡದೇ
ಬದುಕನ್ನು ಬದುಕುತ್ತಿರಬೇಕು
ಜನ ಬಯಸಿದಂತೆ ನಾವಿರಲು ಹೋದರೆ
ನಮ್ಮತನವೆಂಬುವುದು ಮರೆಯಾಗುವುದು
ಯಾರದ್ದೋ ಯೋಜನೆಯಲ್ಲಿ ಜೀವಿಸಿದರೆ
ಜಗತ್ತು ನಮ್ಮನ್ನು ಮರೆತೋಗುವುದು.
‘ಜನ ಏನಂತಾರೆ’ ಎಂಬ ಮಾತೇ ಸಾಕು
ನಮ್ಮೊಳಗಿನ ಕ್ರಿಯಾಶೀಲತೆ ಮಡಿಯಲು
ಯಾರು ಏನೆಂದರೂ ತಲೆ ಕೆಡಿಸಿಕೊಳ್ಳದೇ
ಮುನ್ನುಗ್ಗುತ್ತಿರಬೇಕು ಗುರಿಯ ತಲುಪಲು.
-ಸುನಿಲ್ ಲೇಖಕ್ ಎನ್
ಬೆಂಗಳೂರು