ಹನೂರು:ಕೊಳ್ಳೇಗಾಲ ಹನೂರು ಮುಖ್ಯ ರಸ್ಯೆಯು ಕಾಮಗಾರಿಗೆ ಚುರುಕು ಮುಟ್ಟಿಸಲು ಖುದ್ದು ಶಾಸಕರೆ ಕೊಂಗರಹಳ್ಳಿ ಗ್ರಾಮ ಪಂ. ಕಛೇರಿಗೆ ಬೇಟಿ ನೀಡಿದರು ಹಾಗೂ ಇದೇ ಸಮಯದಲ್ಲಿ ತಾಲ್ಲೂಕು ಉಪ ವಿಭಾಗಾಧಿಕಾರಿ ಗೀತಾ ಹುಡೇದ ಅವರು ಸಹ ಭೇಟಿ ನೀಡಿ ಕೆಶಿಫ್ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಮುಖ್ಯ ರಸ್ತೆಯಲ್ಲಿ ತೆರುವಾದ ಮನೆಗಳು ಅಂಗಡಿಗಳ ಪರಿಹಾರಕ್ಕೆ ಫಲಾನುಭವಿಗಳ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಿದರು.
ಭೇಟಿ ನೀಡಿದ ಸಮಯದಲ್ಲಿ ಮಾತನಾಡಿದ ಶಾಸಕರಾದ ಆರ್ ನರೇಂದ್ರ ಅವರು ಕೆಶಿಫ್ ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೆರುವಾದಂತಹ ಮನೆಗಳು ಅಂಗಡಿಗಳಿಗೆ ಈಗಾಗಲೇ ಪರಿಹಾರವನ್ನು ನೀಡಲಾಗಿದೆ. ಸುಮಾರು 27 ಜನರ ಸೂಕ್ತ ದಾಖಲಾತಿಗಳು ಸರಿಯಿಲ್ಲದೆ ರಿಜೆಕ್ಟ್ ಮಾಡಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ನಾನು ಮತ್ತುಗೀತಾ ಹುಡೇದ ಉಪವಿಗಾಧಿಕಾರಿಗಳು ಪಿಡಿಒ ಅವರು ಕೆಶಿಫ್ ರಸ್ತೆ ಅಧಿಕಾರಿಗಳು ಲಭ್ಯವಿರುವ ದಾಖಲಾತಿಗಳನ್ನು ಕಲೆಕ್ಟ್ ಮಾಡಿ ಮತ್ತೊಮ್ಮೆ ಅದನ್ನು ಪರಿಶೀಲನೆ ನಡೆಸಿ ದಾಖಲಾತಿ ಕೊಟ್ಟಿರುವಂತಹವರಿಗೆ ಪರಿಹಾರ ವ್ಯವಸ್ಥೆ ಮಾಡಬೇಕಾಗಿದೆ.
ಜೊತೆಗೆ ಕಳೆದ 20 ವರ್ಷಗಳಿಂದ ಅಲ್ಲೇ ವಾಸ ಇರುವಂತ ಕೆಲವೊಂದಷ್ಟು 9 ಜನರ ದಾಖಲಾತಿಗಳು ಏನು ಇಲ್ಲದೆ ಇರುವುದು ಕಂಡುಬಂದಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಅವರಿಗೂ ಸಹ ಪರಿಹಾರ ಸಿಗುವಂತೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಶಾಸಕರು ಕೊಂಗರಹಳ್ಳಿ ಕಾಮಗೆರೆ ಗ್ರಾಮದ ಮುಖ್ಯ ರಸ್ತೆ ಅಗಲೀಕರದಲ್ಲಿ ತೆರವಾದ ಮನೆಗಳು ಅಂಗಡಿಗಳ ಮಾಲೀಕರ ಪರಿಹಾರಕ್ಕೆ ಸಂಬಂಧಿಸಿದಂತೆ ಅರ್ಜಿಗಳ ಮೂಲ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ಉಪ ವಿಭಾಗಾಧಿಕಾರಿ ಗೀತಾ ಹುಡೇದ, ಗ್ರಾಮ ಪಂಚಾಯಿತಿ ಪಿಡಿಒ ಮಹೇಂದ್ರ ಹಾಗೂ ಕೆಶಿಫ್ ರಸ್ತೆ ಅಧಿಕಾರಿಗಳು, ಗೌಡ್ರು ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ್, ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್.