ರಾಣೇಬೆನ್ನೂರು:ಫೆ1.ಇಂದಿನ ದೇಶದ ಯುಗ ಮಾನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಅತ್ಯಂತ ಕಡಿಮೆ ಆಗುತ್ತದೆ ಮಕ್ಕಳಲ್ಲಿ ಆಗಿರಬಹುದು ಅಥವಾ ಹಿರಿಯರಲ್ಲಿ ಆಗಿರಬಹುದು,ಅದಕ್ಕೆ ಕಾರಣ ಎಂದರೆ! ಪುಸ್ತಕ ಓದು ಎಂದು ಕಿವಿಗೆ ಅಪ್ಪಳಿಸಿದರೆ ಸಾಕು ಮೊಬೈಲ್ ನಲ್ಲಿ, ಪತ್ರಿಕೆಗಳು ಮತ್ತು ನಾನಾತರಹ ಪುಸ್ತಕಗಳು ಬರುತ್ತವೆ ಓದಲು ನಮಗೆ ಪುಸ್ತಕ ಮತ್ತೇಕೆ ಬೇಕು ಅನುವಷ್ಟರಲ್ಲಿ ಬೆಳೆದು ನಿಂತಿರುತ್ತಾರೆ ಅದೇ ಒಬ್ಬ ಸಾಹಿತಿಯಾದವನಿಗೆ ಅಥವಾ ಪುಸ್ತಕ ಪ್ರೇಮಿಗೆ ಯಾವುದಾದರೊಂದು ಹೊಸ ಅಧ್ಯಯನದ ಪುಸ್ತಕ ಕೈಯಲ್ಲಿ ಸೇರಿ ಬಿಟ್ಟರೆ ಸಾಕು ಇವರ ಮನಸ್ಸು ಕಂಗೊಳಿಸುತ್ತದೆ, ಅಲ್ಲದೇ ಇವರಲ್ಲಿ ರೋಗ ರುಜಿನಿಗಳು ಮಾಯ ಆಗಿ ಬಿಡುತ್ತವೆ ಅಂತ ಹೇಳ ಬಹುದು. ಇನ್ನೂ ತನ್ನ ಸಂತೋಷವನ್ನು ಪುಸ್ತಕ ಓದುವುದರಿಂದಲೆ ತನ್ನ ಮನಸ್ಸನ ಹತೋಟಿಗೆ ಇಟ್ಟು ಕೊಂಡಂತಹ ಕು: ವಿದ್ಯಾಶ್ರೀ ಬಿ.ಬಳ್ಳಾರಿ ಕವಯತ್ರಿ ಇವರು ತನ್ನ ಬಾಲದ ಪ್ರಾಥಮಿಕ ಶಾಲೆಯಿಂದಲೇ ಪುಸ್ತಕ ಓದುವ ಅಲ್ಲದೇ ಸಾಹಿತ್ಯದ ಕಡಿಮೆ ಗಮನ ಹರಿಸಿದ ಈ ಯುವ ಪ್ರತಿಭೆ ಇವರು ಸಣ್ಣ ಪುಟ್ಟ ಕವನ, ಕಥೆ, ವಿವಿಧ ಬಗೆಯ ಲೇಖನ ರಚನೆ ಮಾಡಿ ಅನೇಕ ಓದುಗರ ಮನಸ್ಸು ಗೆದ್ದವಳು ಹಾಗೂ ಅನೇಕ ಪತ್ರಿಕೆಗಳಲ್ಲಿ ಸಹ ತನ್ನ ಗಣನೀಯ ಸಾಧನೆ ಮಾಡಿ ಈಗ ಸಧ್ಯದಲ್ಲಿ ಪ್ರಥಮ ಬಾರಿಗೆ ಒಂದು “ಸಾಧಕರ ಸಾಧನೆಗಳು” ಎರಡನೇದಾಗಿ “ಭಾವ ಸಂಗಮ” ಕಥೆಗಳ ಗುಚ್ಛ, ಇವೆರಡೂ ಪುಸ್ತಕಗಳನ್ನು ವಿಮರ್ಶೆ ಮಾಡಿದರೆ ಅದು ನಮಗೆ ಆರ್ಚಯ ಮುಡಿಸುತ್ತದೆ. ನಾವು ಮೊದಲನೆಯದಾಗಿ ಹೇಳ ಬೇಕಾದರೆ
“ಸಾಧಕರ ಸಾಧನೆಗಳ” ಪುಸ್ತಕಗಳಲ್ಲಿ ಕರ್ನಾಟಕದ ಪೂಜ್ಯ ಶ್ರೀಗಳಾದ ಡಾ.ಶಿವಕುಮಾರ ಸ್ವಾಮಿಗಳು, ಸಮಾಜ ಸೇವಕ ಸೋನು ಸೋದ್. ಇನ್ನೂ ಹಲವಾರು ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳ ಬಗ್ಗೆ ಕುರಿತು ಲೇಖನಗಳ ಮೂಲಕ ರಚನೆ ಮಾಡಿರುತ್ತಾರೆ ಇನ್ನೂ ಎರಡನೇಯದಾಗಿ
“ಭಾವ ಸಂಗಮ” ಕಥೆ ಗುಚ್ಛ, ಈ ಸಾಹಿತ್ಯದಲ್ಲಿ
106 ಕಥೆಗಳು ರಚನೆ ಆಗಿರುತ್ತವೆ, ಇದರಲ್ಲಿ ಮೊದಲು “ಉತ್ತಮ ಬದುಕಿನ ನಿರೀಕ್ಷೆ ಮತ್ತು ಬದುಕಿನ ಮಾರ್ಗ ಇಂದ ಹಿಡಿದು “ಸ್ವಾತಂತ್ರ್ಯೋತ್ಸದ ಹರ್ಷ ಧಾರೆಯಲ್ಲಿ”
ಹೀಗೆ ಹಲವಾರು ವಿವಿಧ ಬಗ್ಗೆಯ ಕಥಾ ಲೇಖನಗಳನ್ನು ರೂಪ ಗೊಂಡಿರುವ ಭಾವ ಸಂಗಮ ಪುಸ್ತಕ, ಇವೆರಡೂ ಪುಸ್ತಕ ಬರೆದು ಹೊರಗೆ ತಂದು ಓದುಗರಿಗೆ ಮೆಚ್ಚುಗೆ ಪಾತ್ರರಾದ “ವಿದ್ಯಾಶ್ರೀ” ಅವರು ಇವರ ಪುಸ್ತಕಗಳನ್ನು ಓದುತ್ತಾ ಹೋದರೆ ಓದುಗರ ಮನಸ್ಸು ಉಲಾಸ ಆಗುತ್ತದೆ ಅಷ್ಟು ಅದ್ಬುತವಾದ ಇವರ ಪುಸ್ತಕಗಳು ಆಗಿರುತ್ತವೆ ಎಂದು ಕವಯತ್ರಿ ಅವರು ಬರೆದ ಪುಸ್ತಕಗಳ ರಾಣೇಬೆನ್ನೂರಿನ ಸಾಹಿತಿ, ಕವಿ, ಲೇಖಕರು ಹಾಗೂ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ ಅಧ್ಯಕ್ಷರಾದ ಬಿ. ಎಸ್. ಬಾಗೇವಾಡಿಮಠ ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.