ಧಾರವಾಡ:2023ನೇ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಧಾರವಾಡ ಜಿಲ್ಲೆಗೆ ಒಳಪಡುವ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ಮಹಿಳಾ ಸಾಧಕಿಯರಾದ ಶ್ರೀಮತಿ ಜಯಶ್ರೀ ದೇಶಮಾನೆ,ಶ್ರೀಮತಿ ಗೌರಮ್ಮ ದೊಡ್ಡಮನಿ,ಶ್ರೀ ಮತಿ ಗಾಯತ್ರಿ ಹೆಗ್ಗೋಡು ಅವರಿಗೆ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕದ ವತಿಯಿಂದ ವಿಜಯಪುರದಲ್ಲಿ ಮಾತೇ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಬಾಗಲಕೋಟ ಜಿಲ್ಲೆಯ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ ನೀಡಿ ಗೌರವಿಸಿದರು. ಈ ವೇಳೆ ಅರಭಾವಿ ಶಾಸಕರಾದ ಶ್ರೀಸತೀಶ್ ಜಾರಕಿಹೊಳಿ,ಜ್ಞಾನಪ್ರಕಾಶ ಸ್ವಾಮೀಜಿಗಳು ಹಾಗೂ ಸಮಾಜ ಸೇವಕಿ,ಹೋರಾಟಗಾರ್ತಿ ಅಕ್ಷತಾ.ಕೆ. ಸಿ.ಅವರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಪ್ರಶಸ್ತಿಯನ್ನು ಪಡೆದ ಸಾಧಕಿಯರು ಹಾಗೂ ಅವರ ಕುಟುಂಭಸ್ಥರು ದಲಿತ ವಿದ್ಯಾರ್ಥಿ ಪರಿಷತ್ ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ಸಮಾಜಮುಖಿಯಾಗಿವೆ ಹಾಗೂ ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳು ನೆರವೇರಲಿ ಪರಿಷತ್ ಗೆ ಯಾವಾಗಲೂ ನಾಡಿನ ಎಲ್ಲಾ ಸಮುದಾಯಗಳಿಂದ ಬೆಂಬಲ ಮತ್ತು ಸಹಕಾರವಿದೆ ಎಂದು ಭರವಸೆ ನೀಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ