ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಇಂಡಿ ಪಟ್ಟಣದ ಡಾ||ಬಿ. ಆರ್.ಅಂಬೇಡ್ಕರ್ ವೃತ್ತದ ಬಳಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ

ಇಂಡಿ ಪಟ್ಟಣದ ಡಾ||ಬಿ. ಆರ್.ಅಂಬೇಡ್ಕರ್ ವೃತ್ತದ ಬಳಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭವು ನೆರವೇರಿತು.

ವಿಜಯಪುರ ಜಿಲ್ಲಾ ನಗರಾಭಿವೃದ್ಧಿ ಮತ್ತು ಇಂಡಿ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಸಭೆಯು ನೆರವೇರಿತು.
ಪುರಸಭೆಯ ಎಲ್ಲಾ ಸದಸ್ಯರಿಗೂ ಪುರಸಭೆಯಿಂದ ಸನ್ಮಾನಿಸಲಾಯಿತು ಮಾನ್ಯ ಶಾಸಕರಾದ ಶ್ರೀ ಯಶವಂತರಾಯ ಗೌಡ ಪಾಟೀಲ್ ಇವರಿಗೆ ಪುರಸಭೆ ಚೀಫ್ ಆಫೀಸರ್ ಲಕ್ಷಿಕಾಂತ ಅವರಿಂದ ಸನ್ಮಾನಿಸಲಾಯಿತು.ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ನಿರ್ಮಲಾ ತಳಕೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವೀದ್ ಮೊಮಿನ್ ಮತ್ತು ಎಲ್ಲಾ ಮುಖಂಡರಿಗೂ ಪುರಸಭೆ ಕಾರ್ಯಾಲಯದಿಂದ ಸನ್ಮಾನ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಂಡಿ ಜನಪ್ರಿಯ ಶಾಸಕರಾದ ಶ್ರೀಯಶವಂತರಾಯ ಗೌಡ ಪಾಟೀಲ್ ಆಧ್ಯಾತ್ಮಿಕತೆಯ ಅವಶ್ಯಕತೆ ಈ ಭಾಗದಲ್ಲಿರುವುದು. ಶ್ರೀ ಸಿದ್ದೇಶ್ವರ ಸ್ವಾಮಿ,ವಿಶ್ವಗುರು ಬಸವಣ್ಣನವರಿಗೆ ಜನ್ಮ ಕೊಟ್ಟ ನಾಡು ನಮ್ಮದು.
ಸಮಾನತೆಯ ಪ್ರತಿಬಿಂಬದಂತೆ ನಾವೆಲ್ಲ ಬದುಕಬೇಕು. ಈ ಕ್ಷೇತ್ರವು ಎಲ್ಲ ವಿಧದಲ್ಲಿ ಸಾಧನೆಗೈದು ಸ್ವಾಭಿಮಾನದ ಬದುಕನ್ನು ಕಟ್ಟಲು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದರು ವಿಧಾನಸಭಾ ಕ್ಷೇತ್ರಕ್ಕೆ ಒಂದೊಂದು ತಾಲ್ಲೂಕು ಮತ್ತು ಹೆಚ್ಚು ಜಿಲ್ಲೆಗಳು ಆದರೆ ಅಧಿಕಾರ ವಿಕೇಂದ್ರೀಕರಣ ಹೊಂದುವುದು. ಆದ್ದರಿಂದ ಪ್ರತಿ ಜಿಲ್ಲೆ, ತಾಲ್ಲೂಕಿನಲ್ಲೂ ನಮಗೆ ಬೇಕಾದ ಸರ್ಕಾರಿ ಕಛೇರಿಗಳು ದೊರೆಯುತ್ತವೆ. ಅಧಿಕಾರ ಹಂಚಿಕೆಯಾಗಿ ಎಲ್ಲಾ ಜನರೊಂದಿಗೆ ಬೆರೆಯಲು ಸಹಕಾರಿ ಆಗುತ್ತದೆ.ಇನ್ನೂ ಹೊರ್ತಿ ರೇವಣ್ಣಸಿದ್ದೇಶ್ವರ ನೀರಾವರಿ ಕಾಲುವೆ ಯೋಜನೆ, ೧೮ ಕೆರೆ ತುಂಬುವ ಯೋಜನೆ, ಭವಿಷ್ಯದಲ್ಲಿ ಈ ನಗರ ಮಾಸ್ಟರ್ ಪ್ಲಾನ್ ಸಿಟಿಯಾಗಬೇಕು ನಿಂಬೆ ಹಣ್ಣಿಗೆ ಜಿಐ ಟ್ಯಾಗ ಕೊಡಿಸುವುದರ ಜೊತೆಗೆ ಈ ತಾಲ್ಲೂಕು ಎಲ್ಲಾ ವಿಧದಲ್ಲಿ ಬೆಳವಣಿಗೆ ಕಂಡು ಜಿಲ್ಲೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು ನಿಜವಾದ ಅಭಿವೃದ್ದಿ ಎಂದರೆ ನಿಮ್ಮ ಮನೆ ಮನೆಗೂ ಬಂದು ದುಡ್ಡು ಹಾಕುವುದು ಅಲ್ಲ,ಒಳ್ಳೆಯ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡುವುದೇ ನಿಜವಾದ ಅಭಿವೃದ್ದಿ ಎಂದು ಜನರೆದುರು ಹೇಳಿದರು.
ನಾವು ವಿಶೇಷವಾದ ಅಭಿವೃದ್ಧಿಯೊಂದಿಗೆ ರಾಜಕಾರಣವನ್ನು ಮಾಡುತ್ತಿದ್ದೇವೆ. ಸಾಮಾಜಿಕ ಕಳಕಳಿಯಿಂದ ಈ ಭಾಗವನ್ನು ಕಟ್ಟಬೇಕಾಗುತ್ತದೆ, ಸಾದ್ಯವಾದರೆ ಪ್ರತಿ ಮನೆ ಮನೆಗೂ, ಪ್ರತಿ ಹೃದಯಕ್ಕೂ ಬಂದು ಮುಟ್ಟುವಂತಹ ಪ್ರಯತ್ನವನ್ನು ಮಾಡುತ್ತೇವೆ.
*ಇಂಡಿ ಕ್ಷೇತ್ರದಲ್ಲಿ ಆದ ಅಭಿವೃದ್ಧಿಯು ಬೇರೆ ಎಲ್ಲ ಕಡೆಯವರು ಬಂದು ನೋಡಬೇಕು ಅಂತಹ ಅಭಿವೃದ್ದಿಯನ್ನು ಮಾಡೋಣ, ನಿಮ್ಮೆಲ್ಲರ ಪ್ರೀತಿ,ಆಶೀರ್ವಾದ ಒಳ್ಳೆಯವರ ಮೇಲೆ ನೀತಿವಂತರ ಮೇಲೆ ಇರಲಿ ಎಂದು ಹೇಳಿದರು.ಕೇವಲ ಭಾಷಣದಲ್ಲಿ ಹೇಳಲ್ಲ, ಕೊಟ್ಟ ಮಾತು ತಪ್ಪದೆ, ಭೀಮಾಶಂಕರ ಸಕ್ಕರೆ ಕಾರ್ಖಾನೆಯನ್ನು ಉದ್ಘಾಟಿಸಿ ತೋರಿಸಿದ್ದೇನೆ ಎಂದು ಎಂದರು.
ಮಾನ್ಯ ಶಾಸಕರಾದ ಶ್ರೀ ಯಶವಂತರಾಯ ಗೌಡ ಪಾಟೀಲ್ ಇವರಿಂದ ಇಂಡಿ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆಗಾಗಿ 100 ಕೋಟಿ ರೂ.ಗಳು,

ಪರಮಪೂಜ್ಯ ಶ್ರೀ ಸಿದ್ದೇಶ್ವರ ಮೆಗಾ ಮಾರ್ಕೆಟ್ ಗಾಗಿ 30 ಕೋಟಿ ರೂ.ಗಳು,

4 ನೇ ಹಂತದ ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ತಾನ ಯೋಜನೆ,

ಅಮೃತ್ 2 ಯೋಜನೆಯಡಿ 20,22,23 ವಾರ್ಡ್ ಗಳಿಗೆ ನೀರು ವಿತರಣಾ ಜಾಲ ವ್ಯವಸ್ಥೆ,

ಹೆಸ್ಕಾಂ ಉಪ ವಿಭಾಗದ ಕಛೇರಿಗೆ ನೂತನ ಕಟ್ಟಡ,

ಡಾ||ಬಿ. ಆರ್. ಅಂಬೇಡ್ಕರ್ ನೂತನ ಪುತ್ಥಳಿ ಪ್ರತಿಷ್ಠಾಪನೆ,

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಶಂಕುಸ್ಥಾಪನೆ, ಮಿನಿ ವಿಧನಸೌಧ ಲಿಫ್ಟ್ ಲೋಕಾರ್ಪಣೆ ಹಲವಾರು ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಜರಗಿತು.

ಇನ್ನೂ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ತಹಶಿಲ್ದಾರ ನಾಗಯ್ಯ ಹಿರೇಮಠ, ಸೂಪರಿಂಟೆಂಡೆಂಟ್ ಅಭಿಯಂತರ ಲೋಕೋಪಯೋಗಿ ಇಲಾಖೆ ಮನೋಜ ಗಡಬಳ್ಳಿ ಮಾತಾನಾಡಿದರು.

ವೇದಿಕೆ ಮೇಲೆ ಬಿ.ಎಂ ಕೋರೆ, ವಿಶ್ವನಾಥ ಬಿರಾದರ, ಜಟ್ಟಪ್ಪ ರವಳಿ, ಸುನೀಲ ಕುಲಕರ್ಣಿ, ರಶೀದ ಅರಬ, ಜಾವಿದ ಮೋಮಿನ,ಕಲ್ಲನಗೌಡ ಪಾಟೀಲ, ಅಣ್ಣಪ್ಪ ಬಿದರಕೋಟಿ,ಜಗದೀಶ ಕ್ಷತ್ರಿ, ಧರ್ಮರಾಜ ವಾಲಿಕಾರ, ಯಮುನಾಜಿ ಸಾಳಂಕೆ,ಶ್ರೀಕಾಂತ್ ಕುಡಿಗನೂರ, ಇಲಿಯಾಸ ಬೊರಾಮಾಣಿ ಹಾಗೂ ಪುರಸಭೆ ಸದಸ್ಯರು ಇನ್ನೂ ಮುಖಂಡರು ಉಪಸ್ಥಿತರಿದ್ದರು.

ವರದಿ-ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ