ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಣೇಶಪುರ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕೆಲ ಮುಖಂಡರು ಎರಡು ರಾಷ್ಟ್ರೀಯ ಪಕ್ಷಗಳ ತೊರೆದು ಜೆಡಿಎಸ್ ಪಕ್ಷಕ್ಕೆ ಎಂ.ಆರ್.ಮಂಜುನಾಥ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು
ಈ ವೇಳೆ ಮಂಜುನಾಥ್ ಅವರು ಮಾತನಾಡಿ ಕ್ಷೇತ್ರದಲ್ಲಿ ನಮ್ಮ ಸಮಾಜಮುಖಿ ಸೇವೆಯನ್ನು ಮನಗಂಡು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ,ಇನ್ನಷ್ಟು ಪಕ್ಷದ ಸಂಘಟನೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು,
ಮುಖಂಡ ಕಾಯಿ ನಂಜಪ್ಪ ನಾಯಕ ಮಾತನಾಡಿ ಇಲ್ಲಿಯವರೆಗೂ ನಾವು ರಾಜೂಗೌಡರ ಕುಟುಂಬಕ್ಕೆ ಬೆಂಬಲ ನೀಡುತ್ತಾ ಅವರ ಅವರ ಗೆಲುವಿಗೆ ಸಹಕಾರ ನೀಡುತ್ತಿದ್ದೆವು ಆದರೆ ಮೂರು ಬಾರಿ ಆಯ್ಕೆಯಾದ ಶಾಸಕರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ನಾವು ಕಾಂಗ್ರೆಸ್ ಪಕ್ಷವನ್ನು ತೊರೆಯುವ ಅನಿವಾರ್ಯ ಯತೆ ಬಂದಿರುವ ಕಾರಣ ಇಂದು ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದರು,
ಈ ಸಂದರ್ಭದಲ್ಲಿ ಮುಖಂಡರುಗಳಾದ ಶಿವಮಲ್ಲು, ಮಹೇಶ್,ಮಂಟೋದಯ, ಸದಾಶಿವ, ಕುಮಾರ್,ಶಿವಣ್ಣ,ಚಿಕ್ಕದಾಸ, ಗೋವಿಂದ,ಮಹದೇವ,ನಾಗ ಸೇರಿದಂತೆ ಹಲವರು ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ಜೆ.ಡಿ.ಎಸ್ ಪಕ್ಷದ ಮುಖಂಡರಾದ ಮಂಜೇಶ,ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್,ತಮ್ಮಯ್ಯ ರಾಜು,ಶಾಗ್ಯದ ಮಣಿಗಾರ್ ಬಾಬು ,ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಸ್ಸಿಂ ಪಾಶ,ಅತಿಕ್,ರಖೀಬ್,ಶಾಂತ ಮೂರ್ತಿಉದ್ದನೂರು,ಸೆಲ್ವಂ,ರಾಹಿಲ್ ಬೇಗ್,ಖಾಲಿದ್ ಇನ್ನಿತರರು ಇದ್ದರು.
ವರದಿ :ಉಸ್ಮಾನ್ ಖಾನ್.