ಸಿಂಧನೂರಿನ ಉಮೇಶ ಪತ್ತಾರ ಸುಕಲಪೇಟೆ ಅವರು ಆಂದ್ರಪ್ರದೇಶದ ಅಮಲಾಪುರಂನಲ್ಲಿ ಕೋನಸೀಮಾ ಚಿತ್ತಕಲಾ ಪರಿಷತ್ ಆಯೋಜಿಸಿದ್ದ ಅಂತರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಸೇವ್ ದ ನೇಚರ್ ಎಂಬ ಶೀರ್ಷಿಕೆಯ ಕಲಾಕೃತಿಯ ಚಿತ್ರಕಲೆಯನ್ನು ಬಿಡಿಸಿ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾದರು.
ಆಂಧ್ರ ಪ್ರದೇಶದ,ಅಮಲಾಪುರಂ ಅಂತರಾಷ್ಟ್ರೀಯ ಮಟ್ಟದ ಕೋನಸೀಮಾ ಚಿತ್ರಕಲಾ ಪರಿಷತ್ತಿನಲ್ಲಿ 31, 32 ಮತ್ತು 33ನೇ ಸ್ಪರ್ಧೆಗಳು ನಡೆದಿದ್ದು, ಈ ಮೂರು ವರ್ಷಗಳಲ್ಲಿ 789 ಚಿತ್ರಕಲಾವಿದರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅದರಲ್ಲಿ 234 ಚಿತ್ರಕಾರರು ವಿಜೇತರಾದರು.ಈ ಸ್ಪರ್ಧೆಗಳಲ್ಲಿ ಭಾರತದಾದ್ಯಂತ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು,ಕರ್ನಾಟಕ, ಮಧ್ಯಪ್ರದೇಶ,ಅಸ್ಸಾಂ,ದೆಹಲಿ ಮುಂತಾದ ಭಾಗಗಳಿಂದ ಭಾಗವಹಿಸಿದವರು ಇತರ ದೇಶ ಕತಾರ್‌ನಿಂದ ಭಾಗವಹಿಸಿದ್ದು ವಿಶೇಷ.16 ವಿಜೇತರು ಚಿತ್ರರತ್ನ ಹಾಗೂ ಪ್ರಸಿದ್ಧ ಚಿತ್ರಕಾರರಾದ ಕೆ.ಕೆ ಹೆಬ್ಬಾರ್,ಕೆ.ಸಿ.ಪಿ.ಅವರ ಪ್ರಶಸ್ತಿ ಮತ್ತು ಪ್ರಶಂಸಾ ಪತ್ರಗಳನ್ನು ಪಡೆದಿದ್ದಾರೆ.ಇದರಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರಿನ ಚಿತ್ರಕಲಾವಿದ ಉಮೇಶ್ ಪತ್ತಾರ್ ಇವರು ಬಿಡಿಸಿದ “ಸೇವ್ ದ ನೇಚರ್ “(ನಿಸರ್ಗ ಪರಿಸರವನ್ನು ಕಾಪಾಡಿ) ಎಂಬ ಶೀರ್ಷಿಕೆಯ ಕಲಾಕೃತಿಯು ಪ್ರತಿಷ್ಠಿತ ಕೆಕೆ ಹೆಬ್ಬಾರ್ ಪ್ರಶಸ್ತಿ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ. ವಿಜೇತರಿಗೆ ಭಾನುವಾರ 22-1-2023 ರಂದು ಬೆಳಿಗ್ಗೆ 10 ಗಂಟೆಗೆ ಪ್ರದರ್ಶನ ಉದ್ಘಾಟನೆ.ಮಧ್ಯಾಹ್ನ 2 ಗಂಟೆಗೆಯಿಂದ ಪ್ರಶಸ್ತಿ ಪ್ರದಾನ ನಡೆಯಿತು.ವಿಜೇತರ 234 ಚಿತ್ರಗಳ ಪ್ರದರ್ಶನ,ಗಣ್ಯರೊಂದಿಗೆ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ದೇಶದ ವಿವಿಧೆಡೆಯಿಂದ ಚಿತ್ರಕಲಾವಿದರು, ಕಲಾಭಿಮಾನಿಗಳು, ಗಣ್ಯರು ಆಗಮಿಸಿ ಕಾರ್ಯಕ್ರಮವನ್ನು ಆಚರಿಸಬೇಕೆಂದು ಈ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಪತ್ರಿಕಾ ವರದಿಗಾರರಿಗೆ ತಿಳಿಸಿದರು.