ಹನೂರು:ತಾಲ್ಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹೀಮ್(86) ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ರಹೀಮ್ ಸಾಹೇಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಇಂದು ಮದ್ಯಾಹ್ನ ಮೃತಪಟ್ಟರು.
ನಾಳೆ ಬೆಳಿಗ್ಗೆ 11 ಗಂಟೆಗೆ ಮೃತರ ಅಂತ್ಯಸಂಸ್ಕಾರ ಕೌದಳ್ಳಿಯ ಮುಸ್ಲಿಂ ಖಬರಸ್ತಾನ್ ನಲ್ಲಿ ನಡೆಲಿದೆ ಎಂದು ಪತ್ರಕರ್ತ ಹಾಗೂ ಮೃತರ ಮೊಮ್ಮಗ ಶಾರುಕ್ ಖಾನ್ ತಿಳಿಸಿದರು.
ವರದಿ:ಉಸ್ಮಾನ್ ಖಾನ್
