ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತದೆ ಎಂಬ ಲೆಕ್ಕಾಚಾರ ಮತದಾರರಲ್ಲಿ ಕುತೂಹಲ ಮೂಡಿಸಿದೆ ಕಾರಣ ಗೋಕಾಕ ಸಾಹುಕಾರರ ಒಂದೊಂದು ದಾಳಗಳು ಮಾತಿನ ದಾಳಿಗಳು ತಾರಕ್ಕಕ್ಕೆರಿವೆ,
ಇದರಿಂದಾಗಿ ಇಲ್ಲಿಯವರೆಗೆ ಒಂದೇ ಪಕ್ಷದ ಆಕಾರ ಪಡೆದುಕೊಂಡಿದ್ದ ಚುನಾವಣಾ ಕದನ ಇದಿಗ ರಂಗೇರಿದೆ ಇದಕ್ಕೆ ಗೋಕಾಕ ಸಾಹುಕಾರನ ದೆಹಲಿ ಭೇಟಿ ರೆಕ್ಕೆ ಪುಕ್ಕಗಳನ್ನು ಒದಗಿಸಿಕೊಟ್ಟಿದೆ ಕ್ಷೇತ್ರದಲ್ಲಿ ಹಾಲಿ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರ ಗೆಲುವು ನಿಶ್ಚಿತ ಎಂಬ ಲೆಕ್ಕಾಚಾರ ಇತ್ತು ಈಗಲು ವಿಚಲಿತಗೊಳ್ಳದೆ ಜನರ ಮಧ್ಯೆ ಸಂವಹನ ಗಟ್ಟಿಗೊಳಿಸಿಕೊಳ್ಳುತ್ತಾ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್ಸಿನ ಕಾರ್ಯಕರ್ತರ ಉತ್ಸಾಹ ಕಡಿಮೆಯಾಗಿಲ್ಲ ಆದರೆ ಭಾರತೀಯ ಜನತಾ ಪಕ್ಷದ ಚುನಾವಣಾ ತಂತ್ರಗಳು ಯಾವ ಘಳಿಗೆಯಲ್ಲಿ ಬದಲಾಗುತ್ತವೆ ಎಂಬ ಜಿಜ್ಞಾಸೆ ಕೈ ಪಾಳೆಯದಲ್ಲಿ ಗರಿಗೆದರುತ್ತಿವೆ ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಸುವ್ಯವಸ್ಥಿತವಾಗಿ ಎದುರಿಸುವ ಚಾಣಾಕ್ಷ ನಡೆಯನ್ನು ಯಾವ ಪಕ್ಷ ತನ್ನದಾಗಿಸಿಕೊಳ್ಳುತ್ತದೆ ಎಂಬುವುದು ಕ್ಷೇತ್ರದಲ್ಲಿನ ಜನರ ಭಾವನೆ ಜೊತೆಗೆ ಈ ಸಲದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿ ಬಹು ದೊಡ್ಡ ಅಂತರ ಸಾಧಿಸಲು ಸಾಧ್ಯವಿಲ್ಲ ಏಕೆಂದರೆ ಇತ್ತಿಚಿನ ರಾಜಕೀಯ ಬೆಳವಣಿಗೆಗಳು ಮತದಾರರನ್ನು ಗೊಂದಲದ ಅರಮನೆಯಲ್ಲಿ ನೂಕಿವೆ ಯಾರೇ ರಾಜರಾದರೂ ಯಾರಿಗೂ ಆಶ್ಚರ್ಯವಿಲ್ಲ ಎಂಬಂತಾಗಿದೆ ಮುಂದಿನ ದಿನಗಳು ಇನ್ನಷ್ಟ್ರೂ ಕಠಿಣತೆಯಿಂದ ಕೂಡಿದ ಕ್ಷಣಗಳು ಬರಬಹುದು ಅದರಲ್ಲಿ ಯಾವ ಪಕ್ಷ ಮತದಾರ ಪ್ರಭುಗಳನ್ನು ಹಿಡಿದಿಟ್ಟುಕೊಳ್ಳುತ್ತಾರೆಂಬುವುದು ಈಗೀರುವ ಮುಂಬರುವ ಪ್ರಶ್ನೆಯಾಗಿದೆ.
ವರದಿ. ದಿನೇಶ್ ಕುಮಾರ್ ಅಜಮೇರಾ ಬೆಳಗಾವಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.